

ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟ-ನಾಗಮಲೆ ಮಾರ್ಗಮಧ್ಯೆ ಶನಿವಾರ ಜೀಪ್ ಮಗುಚಿ 6 ಜನರು ಗಾಯಗೊಂಡಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಹಳ್ಳದಮಾದಹಳ್ಳಿ ಗ್ರಾಮದ ಮರಿದೇವಪ್ಪ (48), ಮಹೇಶ್ (38), ಮಂಜುನಾಥ್ (37), ಸ್ವಾಮಿ(25), ಮಹದೇವಸ್ವಾಮಿ(18) ಹಾಗೂ ಚಾಮರಾಜು(14) ಗಾಯಗೊಂಡವರು. ಶನಿವಾರ ಬೆಳಗ್ಗೆ ಪೂಜೆಗಾಗಿ ಸ್ಥಳೀಯ ಜೀಪ್ ಮೂಲಕ ನಾಗಮಲೆಗೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಮಗುಚಿ ಬಿದ್ದಿದೆ. ಸಾರ್ವಜನಿಕರು ಗಾಯಾಳುಗಳನ್ನು ಮ.ಬೆಟ್ಟದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದರು. ಆದರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.