ಕಾರವಾರ ರೋಟರಿಯಿಂದ ಕಾಲೇಜ್ ಗೆ ನೀಟ್ ಮತ್ತು ಜೆಇಇ ಪುಸ್ತಕ ವಿತರಣೆ

Neet book distribution
Published on

ಕಾರವಾರ: ರೋಟರಿ ಕ್ಲಬ್ ಕಾರವಾರ ಮತ್ತು ರೋಟರಿ ಕ್ಲಬ್ ಬೆಂಗಳೂರು ಪ್ರೈಮ್ ನಿಂದ ಕಾಲೇಜ ಗೆ ಜೆಇಇ ಹಾಗೂ ನೀಟ್ ವೃತ್ತಿಪರ ಪ್ರವೇಶ ಪರೀಕ್ಷೆಗಳ ಪುಸ್ತಕವನ್ನು ಕಾಲೇಜ್ ಗೆ ವಿತರಿಸಲಾಯಿತು.

ಕಾರವಾರದ ಪ್ರೀಮಿಯರ್ ವಿಜ್ಞಾನ ಕಾಲೇಜ್ ಗೆ ನೀಟ್ ಮತ್ತು ಜೆಇಇ ಪರೀಕ್ಷೆಗೆ ಅನುಕೂಲವಾಗುವ ಪುಸ್ತಕ ನೀಡಲಾಯಿತು.

ಈ ಪರೀಕ್ಷೆಗಳನ್ನು ಉತ್ತೀರ್ಣರಾಗಲು ಅತ್ಯಂತ ಕಠಿಣ ಪರಿಶ್ರಮದ ಅವಶ್ಯಕತೆ ಇರುತ್ತದೆ. ಅಷ್ಟೇ ಪುಸ್ತಕಗಳ ಅವಶ್ಯಕತೆ ಇರುತ್ತವೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಈ ಪುಸ್ತಕಗಳನ್ನು ವಿತರಿಸುತ್ತಿದ್ದೇವೆ ಎಂದು ಕಾರವಾರ ರೋಟರಿ ಅಧ್ಯಕ್ಷ ಡಾ. ಸಮೀರಕುಮಾರ ನಾಯಕ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರೀಮಿಯರ್ ವಿಜ್ಞಾನ ಕಾಲೇಜ್ ನ ಪ್ರಾಂಶುಪಾಲ ಆರ್.ಗೋವಿಂದಪ್ಪ ಅವರು ಪುಸ್ತಕಗಳನ್ನು ಸ್ವೀಕರಿಸಿದರು.

ಕಾರವಾರ ರೋಟರಿ ಕ್ಲಬ್ ಕಾರ್ಯದರ್ಶಿ ಗುರುರಾಜ್ ಭಟ್, ಸಮುದಾಯ ಸೇವಾ ನಿರ್ದೇಶಕ ಗುರುದತ್ತ ಬಂಟ್, ವಿನೋದ ಕೋಠಾರಕರ್, ರಾಘವೇಂದ್ರ ಪ್ರಭು, ಗೋವಿಂದ್ರಾವ್ ಮಾನ್ಜ್ರೆಕರ್, ಪ್ರಸನ್ನ ತೆಂಡೂಲ್ಕರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net