ಜೇಡರ ದಾಸಿಮಯ್ಯನ ವಚನಗಳಲ್ಲಿ ಧಾಮಿರ್ಕ ಸಂವೇದನೆಗಳಿವೆ : ಡಾ. ರಾಜಶೇಖರ ದಾನರಡ್ಡಿ

03GDG06
Published on

ವಿಜಯವಾಣಿ ಸುದ್ದಿಜಾಲ ಗದಗ
ಏಕದೇವೋಪಾಸನೆಯ ಪ್ರತಿಪಾದಕರಾಗಿದ್ದ ಆದ್ಯ ವಚನಕಾರ ಜೇಡರ ದಾಸಿಮಯ್ಯನವರು ಸರಳ ಭಾಷೆಯಲ್ಲಿ ಪರಿಣಾಮಕಾರಿ ವಚನಗಳನ್ನು ರಚಿಸಿದ್ದು, ಅವುಗಳಲ್ಲಿ ಸೂಕ್ಷ$್ಮವಾದ ಸಮಾಜದ ಧಾಮಿರ್ಕ ಸಂವೇದನೆಗಳು ಕಂಡುಬರುತ್ತವೆ ಎಂದು ಹಿರಿಯ ಉಪನ್ಯಾಸಕ ಡಾ.ರಾಜಶೇಖರ ದಾನರಡ್ಡಿ ನುಡಿದರು.
ರವಿವಾರ ಶಿವಾನಂದ ನಗರದಲ್ಲಿರುವ ಬಸವಮಂಟಪದಲ್ಲಿ ಜರುಗಿದ ಬಸವದಳದ 1535ನೇ ಶರಣ ಸಂಗಮದಲ್ಲಿ ಜೇಡರ ದಾಸಿಮಯ್ಯನವರನ್ನು ಕುರಿತು ಉಪನ್ಯಾಸ ನೀಡಿ, ವಿಶ್ವಸಾಹಿತ್ಯದಲ್ಲಿ ವಚನಸಾಹಿತ್ಯ ಶ್ರೇಷ್ಠವಾಗಿದ್ದು, ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಸಾಹಿತ್ಯವನ್ನು ಸರಳೀಕರಿಸಿದ ಕೀತಿರ್ ಬಸವಾದಿ ಶರಣರಿಗೆ ಸಲ್ಲುತ್ತದೆ. ಪ್ರತಿಭಟನಾ ಮನೋಭಾವ ಹೊಂದಿದ್ದ ಜೇಡರ ದಾಸಿಮಯ್ಯ ಮೊನಚು ಭಾಷೆಯಿಂದಲೇ ಸಮಾಜದಲ್ಲಿನ ಅಪಸವ್ಯಗಳನ್ನು ಖಂಡಿಸಿದ್ದರು. ಈ ಕಾಲಕ್ಕೂ ದಾಸಿಮಯ್ಯನ ವಚನಗಳು ನಿತ್ಯನೂತನವಾಗಿವೆ ಎಂದರು.
ಶರಣ ಚಿಂತಕರಾದ ಅಶೋಕ ಬರಗುಂಡಿ ಮಾತನಾಡಿ, ದೇವರ ದಾಸಿಮಯ್ಯ ಹಾಗೂ ಜೇಡರ ದಾಸಿಮಯ್ಯ ಬೇರೆ ಬೇರೆಯಾಗಿದ್ದು, ವಚನಗಳನ್ನು ರಚಿಸಿದವನು ಜೇಡರ ದಾಸಿಮಯ್ಯನೇ ಹೊರತು ದೇವರ ದಾಸಿಮಯ್ಯಅಲ್ಲ. ಡಾ. ಎಂ. ಎಂ ಕಲಬುಗಿರ್ ಸೇರಿದಂತೆ ಅನೇಕ ಸಂಶೋಧಕರು ಜೇಡರ ದಾಸಿಮಯ್ಯನೇ ವಚನಕಾರ ಎಂದು ಗುರುತಿಸಿದ್ದು, ಈ ವಿಷಯದಲ್ಲಿ ಅನಗತ್ಯ ಗೊಂದಲ ಮೂಡಿಸಬಾರದು ಎಂದರು.
ಬಸವದಳದ ಅಧ್ಯ ವಿ.ಕೆ ಕರೇಗೌಡ್ರ ಅಧ್ಯತೆ ವಹಿಸಿದ್ದರು. ಎನ್​.ಎಚ್​ ಹಿರೇಸಕ್ಕರಗೌಡರ ವಚನ ಚಿಂತನೆ ನಡೆಸಿದರು. ಬಸವದಳದ ಸದಸ್ಯರಾದ ಸಂತೋಷ್​ ನರಗುಂದ, ಪ್ರಕಾಶ ಅಸುಂಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net