ವಿವಾದಿತ ಸ್ಥಳಕ್ಕೆ ಡಿಸಿಎಂ ಭೇಟಿ,  ಜೆಡಿಯು ವಕ್ತಾರ ಹೈಬತ್ತಿ ಖಂಡನೆ

Screenshot_20250508-195404_1.jpg
Published on

ಹುಬ್ಬಳ್ಳಿ: ಇಲ್ಲಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಸಂಯುಕ್ತ ಜನತಾದಳ ಕಚೇರಿಯನ್ನು ಅತಿಕ್ರಮಣ ಮಾಡಿಕೊಂಡು, ಇದೀಗ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿರುವಾಗ ಡಿಸಿಎಂ ಶಿವಕುಮಾರ ಅವರು ವಿವಾದಿತ ಸ್ಥಳಕ್ಕೆ ಭೇಟಿ ನೀಡಿರುವುದನ್ನು ಜೆಡಿಯು ವಕ್ತಾರ ಎಸ್.ಎನ್. ಹೈಬತ್ತಿ ಖಂಡಿಸಿದ್ದಾರೆ.

ಅಧಿಕಾರ ಹಿಡಿದ ತಕ್ಷಣ ಕಾಂಗ್ರೆಸ್ ಪಕ್ಷ ಜಾಗವನ್ನು ಅತಿಕ್ರಮಣ ಮಾಡಿದೆ. ಸಧ್ಯ ಇದರ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯವು ಈಗಾಗಲೇ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಮಧ್ಯಂತರ ಆದೇಶ ಮಾಡಿದೆ.

ಪರಿಸ್ಥಿತಿ ಹೀಗಿರುವಾಗ ರಾಜ್ಯದ ಉಪಮುಖ್ಯಮಂತ್ರಿಗಳು ಜೆಡಿಯು ಕಚೇರಿ ಜಾಗ ಪ್ರವೇಶಿಸಿದ್ದು ಖಂಡನೀಯ. ಇದನ್ನು ಕಾಂಗ್ರೆಸ್ ಕಚೇರಿ ಎಂದು ಜನರಿಗೆ ತಪ್ಪು ಸಂದೇಶ ನೀಡಿರುವ ಡಿಸಿಎಂ ಕಾರ್ಯ ಕಾನೂನು ಮತ್ತು ಸಂವಿಧಾನ ಬಾಹಿರವಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ದಬ್ಬಾಳಿಕೆ ನೋಡಿದರೆ ಸಾಮಾನ್ಯ ಜನರ ಆಸ್ತಿ-ಪಾಸ್ತಿಗಳ ಸುರಕ್ಷತೆಯ ಬಗ್ಗೆ ಸಂದೇಹ ಉಂಟಾಗುತ್ತಿದೆ. ಜೆಡಿಯು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ನ್ಯಾಯಾಲಯದ ಆದೇಶಕ್ಕೆ ಮನ್ನಣೆ ನೀಡಿ ಪದ ಕಚೇರಿಯನ್ನು ಪ್ರವೇಶಿಸಿಲ್ಲ.

ಆದರೆ, ಕಾಂಗ್ರೆಸ್ ನವರು ಸರ್ಕಾರ ಇದ್ದ ಕಾರಣ ಅಧಿಕಾರಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಇದರ ಬಗ್ಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಸ್.ಎನ್. ಹೈಬತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net