ವಿಧಾನಸಭೆಯಲ್ಲಿ ಜವಾಬ್ದಾರಿ ಮರೆತ ಜನಪ್ರತಿನಿಧಿಗಳು ; ಜೆಡಿಯು ರಾಜ್ಯಾಧ್ಯಕ್ಷ ಮಹಿವಾಪಟೇಲ್ ಅಭಿಪ್ರಾಯ

DSC_2010
Published on

ತುಮಕೂರು : ವಿಧಾನಸಭಾ ಅಧಿವೇಶನ ಎಂದರೆ ಜಗಳ ಎನ್ನುವಂತಹ ಪರಿಸ್ಥಿತಿ ನಿರ್ವಾಣವಾಗಿದೆ, ವಿಧಾನಸಭೆಗೆ ಬರುವುದು ಜನರ ಸಮಸ್ಯೆ ಚರ್ಚಿಸುವುದಕ್ಕೆ, ಜನಪರ ಕಾರ್ಯಕ್ರಮ ರೂಪಿಸುವುದಕ್ಕೆ ಎನ್ನುವುದನ್ನು ಶಾಸಕರು ಮರೆತಿದ್ದಾರೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿವಾಪಟೇಲ್ ಅಭಿಪ್ರಾಯಪಟ್ಟರು.

ಮೈದಾಳದ ಶಿವಶೈಕ್ಷಣಿಕ ಆಶ್ರಮದಲ್ಲಿ ಮಂಗಳವಾರ ರಾಮಕೃಷ್ಣ ಹೆಗಡೆ ಅವರ ಜನ್ಮದಿನಾಚರಣೆ ಅಂಗವಾಗಿ ಅನಾಥ ಮಕ್ಕಳಿಗೆ ಸಿಹಿ ವಿತರಿಸಿ ಮಾತನಾಡಿದ ಅವರು, ಅಧಿಕಾರಕ್ಕಾಗಿ ಜೆ.ಎಚ್.ಪಾಟೀಲ್, ರಾಮಕೃಷ್ಣ ಹೆಗಡೆ ರಾಜಕಾರಣಕ್ಕೆ ಬರಲಿಲ್ಲ, ಸವಾಜ ಸೇವೆಯನ್ನು ವಾಡುವ ಉದ್ದೇಶದಿಂದ ಬಂದಿದ್ದರು ಎಂದರು.

ರಾಮಕೃಷ್ಣ ಹೆಗಡೆ ಅವರು ಜೆಡಿಯು ಪಕ್ಷವನ್ನು ಕಟ್ಟಲು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದರು, ನಮ್ಮ ತಂದೆ ಹಾಗೂ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕೆಲವು ಭ್ರಷ್ಟರು ಜತೆಯಲ್ಲಿದ್ದರು ಅವರನ್ನು ಹೇಗೆ ಬಳಕೆ ವಾಡಬೇಕೆಂಬುದು ಅವರಿಗೆ ತಿಳಿದಿತ್ತು ಎಂದು ಅಭಿಪ್ರಾಯಪಟ್ಟರು.

ಎಲ್ಲ ಪಕ್ಷಗಳಂತೆ ಕೆಡುವುವ ಕೆಲಸ ವಾಡದೇ ಕಟ್ಟುವ ಕೆಲಸ ವಾಡಬೇಕೆಂಬುದು ಸಂಯುಕ್ತ ಜನತಾದಳದ ಧ್ಯೇಯ, ಎಲ್ಲರನ್ನು ಒಳ ಗೊಳ್ಳುವುದು ಪಕ್ಷದ ಸಿದ್ಧಾಂತ, ಎಲ್ಲರನ್ನು ಕೂಡಿಸಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವ ಗುರಿಯನ್ನು ಜೆಡಿಯು ಹೊಂದಿದೆ, ರಾಮಕೃಷ್ಣ ಹೆಗಡೆ, ಎಸ್.ಆರ್.ಬೊವ್ಮಾಯಿ ಅವರಂತಹ ನಾಯಕರ ವಾರ್ಗದರ್ಶನ ನಮ್ಮ ಪಕ್ಷಕ್ಕಿದೆ ಎಂದರು.

ಹಿರಿಯ ಸಾಹಿತಿ ಕವಿತಾಕೃಷ್ಣ, ಜೆಡಿಯು ಜಿಲ್ಲಾ ಟಕದ ಅಧ್ಯಕ್ಷ ಕೆ.ಜಿ.ಎಲ್.ರವಿ ವಾತನಾಡಿದರು, ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಅಧ್ಯಕ್ಷ ರಮೇಶ್‌ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಧನಂಜಯ್, ರಾಜ್ಯ ಕಾರ್ಯದರ್ಶಿ ಶಶಿಕುವಾರಗೌಡ, ಚಂದ್ರಶೇಖರ್ ಗಂಗೂರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net