ಸಿಲೆಂಡರ್ ಬೆಲೆ ಏರಿಕೆಗೆ ಆಕ್ರೋಶ

IMG-20230302-WA0030.jpg
Published on

ರಾಯಚೂರು: ಅಡುಗೆ ಅನಿಲ‌ ಸಿಲೆಂಡರ್ ಬೆಲೆ ಏರಿಕೆ ಖಂಡಿಸಿ ಸ್ಣಳೀಯ ಅಂಬೇಡ್ಕರ್ ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಸೌದೆಯಲ್ಲಿ ಅಡುಗೆ ಮಾಡುವ ಮೂಲಕ ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆರ್ಥಿಕ‌ ಹೊರೆ ಉಂಟು ಮಾಎಉವ ಮೂಲಕ ಬದುಕನ್ನು ದುರ್ಬರಗೊಳಿಸಿದೆ ಎಂದು ಆಕ್ರೋಶ ವ್ಯಕ್ತೊಡಿಸಿದರು.

ಏಕಾಏಕಿ ಸಿಲೆಂಡರ್ ದರವನ್ನು 50 ರೂ.‌ ಹೆಚ್ಚಳ ಮಾಡಿದ್ದು, ಇದರಿಂದ ಬಡ ಜನರು ಪುನಃ ಸೌದೆಗೆ ಮೊರೆ ಹೋಗುವಂತಾಗಿದೆ. ಕೂಡಲೇ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಪದಾಧಿಕಾರಿಗಳಾದ ಮಹಾಂತೇಶ ಪಾಟೀಲ್ ಅತ್ತನೂರು, ಎನ್.ಶಿವಶಂಕರ, ಯೂಸೂಫ್ ಖಾನ್, ರಾಮಕೃಷ್ಣ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net