ಸ್ವಪಕ್ಷೀಯರಿಂದಲೇ ಜೆಡಿಎಸ್​ನ ಏಕೈಕ ಸಂಸದ ಪ್ರಜ್ವಲ್​ ರೇವಣ್ಣ ಅನಾದರಕ್ಕೆ ಒಳಗಾದರೇ?

jds mar 2020
Published on

ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ಜೆಡಿಎಸ್​ ಪಕ್ಷದ ಕಾರ್ಯಾಗಾರದಲ್ಲಿ ಪಕ್ಷದ ಏಕೈಕ ಸಂಸದ ಪ್ರಜ್ವಲ್​ ರೇವಣ್ಣ ಅವರ ಭಾವ ಚಿತ್ರ ಇಲ್ಲದಿರುವುದಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ವಾಸವಿ ಮಹಲ್​​ನಲ್ಲಿ ಪಕ್ಷ 2 ದಿನಗಳ ಕಾರ್ಯಾಗಾರ ನಡೆಸುತ್ತಿದೆ. ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ, ನಿಖಿಲ್​ ಕುಮಾರಸ್ವಾಮಿ ಅವರ ಭಾವ ಚಿತ್ರಗಳನ್ನು ಮಾತ್ರವೇ ಬ್ಯಾನರ್​ನಲ್ಲಿ ಮುದ್ರಿಸಲಾಗಿದೆ. ಸಂಸದ ರೇವಣ್ಣ ಅವರ ಭಾವ ಚಿತ್ರ ಇಲ್ಲದಿರುವುದು ಕಾರ್ಯಕರ್ತರಲ್ಲಿ ಬೇಸರ ಮೂಡಿಸಿ ಸಾಮಾಜಿ ಜಾಲ ತಾಣದಲ್ಲಿ ಪೋಸ್ಟ್​ಗಳನ್ನು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಯಾಗಾರಕ್ಕೆ ಸಂಸದ ರೇವಣ್ಣ ಕೂಡ ಗೈರಾಗಿದ್ದಾರೆ. ಜೆಡಿಎಸ್​ನಲ್ಲಿ ಬೆಳೆಸಬೇಕಾದವರನ್ನು ಬೆಳೆಸುವುದಿಲ್ಲ. ಪಕ್ಷದಲ್ಲಿ ಉಳಿಸಿಕೊಳ್ಳಬೇಕಾದವರನ್ನು ಉಳಿಸಿಕೊಳ್ಳುವುದಿಲ್ಲ. ಹೀಗಾಗಿ ಪಕ್ಷದಿಂದ ಮಧು ಬಂಗಾರಪ್ಪ ಹೊರ ನಡೆಯಲು ನಿರ್ಧರಿಸಿದ್ದಾರೆ. ಸಂಸದರಾಗಿರುವ ರೇವಣ್ಣ ಅವರನ್ನು ತುಳಿಯಲು ನಿರ್ಧರಿಸಿದ್ದಾರೆ. ಆದರೆ ಕಾರ್ಯಕರ್ತರು ಇರುವವರೆಗೂ ಸಂಸದ ರೇವಣ್ಣ ಅವರನ್ನು ತುಳಿಯಲು ಸಾಧ್ಯವಿಲ್ಲ ಎಂದು ಕಾರ್ಯಕರ್ತರು ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net