

ಮೈಸೂರು: ‘ಕಳೆದ ಎರಡು ಬಾರಿ ನಿಮಗೆ ಓಟ್ ಹಾಕಿ ಗೆಲ್ಲಿಸಿದ್ದೇವೆ, ಮುಂದೆಯೂ ಗೆಲ್ಲಿಸುತ್ತೇವೆ. ನಾವು ನಿಮ್ಮನ್ನು ಸೋಲಿಸುವುದಿಲ್ಲ. ಈ ಬಾರಿಯೂ ಗೆದ್ದೇ ಗೆಲ್ಲುತ್ತೀರಾ ಎಂದು ಜೆಡಿಎಸ್ ಕಾರ್ಯಕರ್ತರೊಬ್ಬರು ಪ್ರತಾಪ್ ಸಿಂಹ ಅವರಿಗೆ ಭರವಸೆ ನೀಡಿದರು.
ನಗರದಲ್ಲಿ ದಶಪಥ ಹೆದ್ದಾರಿಯ ಸರ್ವೀಸ್ ರಸ್ತೆಯನ್ನು ಪರಿಶೀಲಿಸಲು ಕೆ.ಆರ್. ಮಿಲ್ ಬಳಿ ತೆರಳಿದ ಸಂದರ್ಭ ಜೆಡಿಎಸ್ ಕಾರ್ಯಕರ್ತರೊ ಬ್ಬರು ತಮ್ಮ ಅಭಿಪ್ರಾಯವನ್ನು ತೆರೆದಿಟ್ಟರು.
‘ಇದು ಜೆಡಿಎಸ್ ಬೆಲ್ಟ್, ಆದರೂ ನಿಮಗೆ ಓಟ್ ಹಾಕಿ ಗೆಲ್ಲಿಸಿದ್ದೇವೆ. ಈ ಭಾಗದ ಊರುಗಳ ಬೂತ್ ತಗೆದು ನೋಡಿ ನಿಮಗೆ ನಾವು ಲೀಡ್ ಕೊಟ್ಟಿದ್ದೇವೆ. ನಮಗೆ ಮತ್ತಷ್ಟು ಕೆಲಸ ಮಾಡಿಕೊಡಿ’ ಎಂದು ಮನವಿ ಮಾಡಿದರು.