ಉಪ ಚುನಾವಣೆಯಲ್ಲಿ ಜೆಡಿ ಎಸ್ ಸ್ಪರ್ಧೆಯ ಕುರಿತು ಕುಮಾರಸ್ವಾಮಿ ಹೇಳಿದ್ರು ನೋಡಿ

H D Kumaraswamy 1
H D Kumaraswamy
Published on

ಕಲಬುರಗಿ: ಶೀಘ್ರದಲ್ಲೇ ನಡೆಯಲಿರುವ ಬಸವ ಕಲ್ಯಾಣ, ಮಸ್ಕಿ ಹಾಗೂ ಸಿಂದಗಿ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ಪರ್ಧಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ನಗರದಲ್ಲಿ ಇಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ದಿನಗಳ ಹಿಂದೆ ಪಕ್ಷದ ವರಿಷ್ಠ , ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಆಡಳಿತಾರೂಢ ಪಕ್ಷದ ಎದುರು ಆರ್ಥಿಕ ಸಂಪನ್ಮೂಲ ದಿಂದ ಎದುರಿಸುವುದು ಕಷ್ಟ ಎಂಬುದರ ಹಿನ್ನೆಲೆಯಲ್ಲಿ ಹೇಳಿರಬಹುದು.‌ ಆದರೆ, ಮೂರೂ ಕ್ಷೇತ್ರದಲ್ಲೂ ಜೆಡಿಎಸ್ ಪಕ್ಷ ಸ್ಪರ್ಧಿಸಲಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚಿಸುವುದರೊಂದಿಗೆ ಚಾಲನೆ ನೀಡಲಾಗಿದೆ. ಸಮರ್ಥವಾಗಿ ಚುನಾವಣೆ ಎದುರಿಸಲಾಗುವುದು. ಹಿಂದೆ ಸರಿಯುವುದಿಲ್ಲ‌ ಎಂದು ಪ್ರಕಟಿಸಿದರು.

ಕೇಂದ್ರ ಸರ್ಕಾರದ ಧೋರಣೆ ಹಾಗೂ ರಾಜ್ಯ ಸರ್ಕಾರದ ಭೃಷ್ಟಾಚಾರ ಆಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ರಾಜ್ಯ ಸರ್ಕಾರದ ವ್ಯಾಪಕ ಭೃಷ್ಟಾಚಾರದ ವಿರುದ್ದ ಅವರದ್ದೇ ಬಿಜೆಪಿ ಶಾಸಕರೇ ಅಸಮಧಾನ ಹೊರ ಹಾಕುತ್ತಿದ್ದಾರೆ. ಇದಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಹೈಕಮಾಂಡ್ ಗೆ ಬರೆಸಿರುವ 11 ಪುಟಗಳ ವರದಿಯೇ ಸಾಕ್ಷಿ ಎಂದು ಟೀಕಿಸಿದರು. (ವಿಜಯವಾಣಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net