ಪ್ರತಿಭಟನೆಗೆ ತಾಲೂಕು ಜೆಡಿಎಸ್ ಘಟಕ ಬೆಂಬಲ

Oplus_16908288
Oplus_16908288
Published on

 ಸಿದ್ದಾಪುರ : ಅಮ್ಮತ್ತಿ ಹಾಗೂ ಕಾರ್ಮಾಡು ಹೋಬಳಿ ಗ್ರಾಮಗಳಲ್ಲಿ ನಿವೇಶನ ರಹಿತ ಕುಟುಂಬಗಳು ಸರ್ಕಾರಿ ಪೈಸಾರಿ ಜಾಗದಲ್ಲಿ ನಿರ್ಮಿಸಿಕೊಂಡಿರುವ ಗುಡಿಸಲು ತೆರವುಗೊಳಿಸಿರುವುದನ್ನು ಖಂಡಿಸಿ 9 ದಿನಗಳಿಂದ ನಿವಾಸಿಗಳು ನಾಡ ಕಚೇರಿ ಎದುರು ನಡೆಸುತ್ತಿರುವ ಪ್ರತಿಭಟನೆಗೆ ತಾಲೂಕು ಜೆಡಿಎಸ್ ಘಟಕ ಬೆಂಬಲಿಸಿದೆ.

ಜೆಡಿಎಸ್ ವಿರಾಜಪೇಟೆ ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್ ಈ ಸಂದರ್ಭ ಮಾತನಾಡಿ, ಸ್ವಂತ ಸೂರು ಪಡೆಯಲು ಹೋದವರನ್ನು ಒಕ್ಕಲೆಬ್ಬಿಸುವುದು ಎಷ್ಟು ನ್ಯಾಯ ಎಂದರು. ಜೀವನ ನಡೆಸುವುದಕ್ಕೆ ತಲೆ ಮೇಲೊಂದು ಸೂರು ಇರಲಿ ಎಂದು ಹೋರಾಟ ಮಾಡುವವರು 8 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರೂ ತಾಲೂಕು ಆಡಳಿತ ನಿದ್ರಾಹೀನ ಸ್ಥಿತಿಯಿಂದ ಹೊರಗೆ ಬಂದಿಲ್ಲ ಎಂದು ದೂರಿದರು. ವಿಷಯವನ್ನು ಕೂಡಲೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಗಮನಕ್ಕೆ ತಂದು ಧರಣಿ ನಿರತರಿಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದರು.

ಜೆಡಿಎಸ್ ಮುಖಂಡರಾದ ಜಯಮ್ಮ, ಹರ್ಷ, ಸರ್ಪುದ್ದೀನ್, ಬಿಎಸ್ಪಿ ತಾಲೂಕು ಪಾಪಣ್ಣ, ಮುಖಂಡರಾದ ಮಾದೇಶ್, ಹೊನ್ನಪ್ಪ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net