

ಮಂಡ್ಯ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಾವೇರಿ ಹೋರಾಟ ಮಾಡುತ್ತಿರುವ ಸಂಘಟನೆಗಳ ಬಗ್ಗೆ ಕುರಿತು ನೀಡಿರುವ ಹೇಳಿಕೆಯನ್ನು ಜೆಡಿಎಸ್ ಪರಿಶಿಷ್ಟ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎಲ್.ತುಳಸೀಧರ್ ಖಂಡಿಸಿದ್ದಾರೆ.
ನಾವು ಮೇಕೆದಾಟು ಅಣೆಕಟ್ಟೆಗಾಗಿ ಪಾದಯಾತ್ರೆ ಮಾಡುವಾಗ ರೈತ ಸಂಘಟನೆ ಹಾಗೂ ಚಳವಳಿಗಾರರು ಎಲ್ಲಿದ್ದರೂ ಎಂದು ಡಿ.ಕೆ.ಶಿವಕುಮಾರ್ ಲಘುವಾಗಿ ಮಾತನಾಡಿದ್ದಾರೆ. ಡಿಕೆಶಿ ಅವರು ತಮ್ಮ ಪಕ್ಷದ ಗೆಲುವಿಗಾಗಿ ಮಾಡಿದ ಪಾದಯಾತ್ರೆಯೇ ವಿನಃ, ಅದು ರಾಜ್ಯದ ರೈತರ ಅಥವಾ ಸಾರ್ವಜನಿಕರ ಪರವಾಗಿರಲಿಲ್ಲ. ನಮ್ಮ ಕಾಂಗ್ರೆಸ್ ಸರ್ಕಾರ ಬಂದ ಒಂದು ವಾರದೊಳಗೆ ಮೇಕೆದಾಟು ಅಣೆಕಟ್ಟೆಗೆ ಶಂಕುಸ್ಥಾಪನೆ ಮಾಡುತ್ತೇನೆಂದು ಜಂಭ ಕೊಚ್ಚಿಕೊಂಡಿದ್ದರು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ನೂರು ದಿನ ಕಳೆದರೂ ಮೇಕೆದಾಟು ಅಣೆಕಟ್ಟಿನ ಬಗ್ಗೆ ಏಕೆ ಚಕ್ಕಾರ ಎತ್ತುತ್ತಿಲ್ಲ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.