ಜೆಡಿಎಸ್ ರೋಡ್ ಶೋ | ಸೆರಗೊಡ್ಡಿ ಮತಯಾಚಿಸಿದ ವಿಶಾಲಾಕ್ಷಿ ಪಾಟೀಲ

jds road show
ನಾಮಪತ್ರ ಸಲ್ಲಿಕೆಗೂ ಮುನ್ನ ಸಿಂದಗಿಯಲ್ಲಿ ಜೆಡಿಎಸ್ ಅಭ್ಯರ್ಥಿ ವಿಶಾಲಾಕ್ಷಿ ಶಿವಾನಂದ ಪಾಟೀಲ ಸೋಮಜಾಳ ಅವರು ಸಾವಿರಾರು ಕಾರ್ಯಕರ್ತರೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು.
Published on

ಸಿಂದಗಿ: ಜೆಡಿಎಸ್ ಅಭ್ಯರ್ಥಿ ವಿಶಾಲಾಕ್ಷಿ ಶಿವಾನಂದ ಪಾಟೀಲ ಸೋಮಜಾಳ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆ ಮುಖಾಂತರ ಆಗಮಿಸಿ ಗುರುವಾರ ನಾಮಪತ್ರ ಸಲ್ಲಿಸಿದರು.

ಪಟ್ಟಣದ ಮಹಾತ್ಮಾಗಾಂಧಿ ವೃತ್ತದಿಂದ ವಿಜಯಪುರ ರಸ್ತೆ ಮಾರ್ಗವಾಗಿ ತಾಲೂಕು ಆಡಳಿತ ಸೌಧದ ಕಚೇರಿವರೆಗೆ ಮೆರವಣಿಗೆ ನಡೆಸಿ, ಜೆಡಿಎಸ್ ನಾಯಕಿ ಸುನೀತಾ ದೇವಾನಂದ ಚವ್ಹಾಣ ಅವರ ನೇತೃತ್ವದಲ್ಲಿ ಚುನಾವಣಾಧಿಕಾರಿ ಶಿದ್ರಾಮ ಮಾರಿಹಾಳ ಅವರಿಗೆ ನಾಮಪತ್ರ ಸಲ್ಲಿಸಿದರು.

ಬಸವೇಶ್ವರ ವೃತ್ತದಲ್ಲಿ ಕಾರ್ಯಕರ್ತನ್ನುದ್ದೇಶಿಸಿ ಮಾತನಾಡಿದ ಅವರು, ದಿ. ಶಿವಾನಂದ ಪಾಟೀಲರು ನಿಮ್ಮೆಲ್ಲರ ಸೇವೆ ಮಾಡುವ ಕನಸು ಹೊಂದಿದ್ದರು. ಅವರ ಕನಸು ಈಡೇರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಬಹುಪಾಲು ಮತದ ಹಕ್ಕು ಹೊಂದಿರುವ ಜೆಡಿಎಸ್ ಪಕ್ಷ ನನ್ನ ಮೇಲೆ ವಿಶ್ವಾಸವಿರಿಸಿ ಅಭ್ಯರ್ಥಿಯನ್ನಾಗಿಸಿದೆ. ನನ್ನ ಯಜಮಾನರ ಕನಸು, ನನಸಿಗೆ ನನ್ನ ಉಡಿಗೆ ನಿಮ್ಮ ಮತ ಹಾಕಿ ಎಂದು ಸೆರಗೊಡ್ಡುತ್ತಾ ಮತಯಾಚಿಸಿದರು.

ಜೆಡಿಎಸ್ ನಾಯಕಿ ಸುನೀತಾ ಚವ್ಹಾಣ ಮಾತನಾಡಿ, ರೈತಪರ ಯೋಜನೆಗಳ ಹೆಮ್ಮೆಯ ಆಡಳಿತಗಾರ ಸಿಂದಗಿ ಕ್ಷೇತ್ರವನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವುದಾಗಿ ಭಾಷೆ ನೀಡಿದ್ದಾರೆ. ವಿಶಾಲಾಕ್ಷಿ ಅವರನ್ನು ಅಧಿಕಾರಕ್ಕೆ ತಂದರೆ ಕ್ಷೇತ್ರದ ಅಭಿವೃದ್ಧಿ ಶತಸಿದ್ಧ ಎಂದರು.

ತಾಲೂಕು ಅಧ್ಯಕ್ಷ ಸಂತೋಷ ಹರನಾಳ ಮಾತನಾಡಿದರು. ಆರ್.ಕೆ. ಪಾಟೀಲ, ಎಂ.ಎನ್. ಉಸ್ತಾದ, ಪ್ರಕಾಶ ಹಿರೇಕುರುಬರ, ಶೈಲಜಾ ಸ್ಥಾವರಮಠ, ಇಮಾಮ್ ನದ್ಾ, ಶೈಲಜಾ ಸ್ಥಾವರಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net