ಜೆಡಿಎಸ್‌ಗೆ ಮರು ಸೇರ್ಪಡೆಯಾದ ಆಲ್ಕೋಡ್

26LNG03
Published on

ಅರಕೇರಾ: ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಹನುಮಂತಪ್ಪ ಆಲ್ಕೋಡ್ ಕಾಂಗ್ರೆಸ್ ತೊರೆದು ಬೆಂಗಳೂರಿನಲ್ಲಿ ಬುಧವಾರ ಜೆಡಿಎಸ್‌ಗೆ ಮರು ಸೇರ್ಪಡೆಯಾದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮಾತನಾಡಿ, ಹನುಮಂತಪ್ಪ ಆಲ್ಕೋಡ್ ಅವರ ಮನಸ್ಸು ಜೆಡಿಎಸ್‌ನಲ್ಲಿ ದೇಹ ಕಾಂಗ್ರೆಸ್‌ನಲ್ಲಿತ್ತು. ಉತ್ತರ ಕರ್ನಾಟಕದಲ್ಲಿನ ರಾಜಕಾರಣಕ್ಕೆ ಬೇಸತ್ತು ಪಕ್ಷ ತೊರೆದಿದ್ದರು. ಕಾಂಗ್ರೆಸ್‌ನಲ್ಲಿ ಅವರ ಶಕ್ತಿಯನ್ನು ಬಳಕೆ ಮಾಡಿಕೊಳ್ಳದೆ ಮೂಲೆ ಗುಂಪು ಮಾಡಿದ್ದರು. ದಲಿತ ಸಮುದಾಯದಲ್ಲಿ ಎಡಗೈ ಗುಂಪಿಗೆ ಸೇರಿದ ಆಲ್ಕೋಡ್ ಸಂಘಟನಾತ್ಮಕವಾಗಿ ಕೆಲಸ ಮಾಡಿದ್ದಾರೆ. ಆಲ್ಕೊಡ್ ಮರು ಸೇರ್ಪಡೆಯಿಂದ ದೊಡ್ಡ ಮಟ್ಟದ ಶಕ್ತಿ ಬಂದಿದ್ದು, ಕಾರ್ಯಕರ್ತರಲ್ಲಿ ಹೆಚ್ಚಿನ ಹುಮ್ಮಸ್ಸು ತಂದಿದೆ ಎಂದು ಹೇಳಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ದೇವದುರ್ಗ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ.ನಾಯಕ, ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್, ಪ್ರಮುಖರಾದ ಸಿದ್ದು ಬಂಡಿ, ಸಿದ್ದನಗೌಡ ಪಾಟೀಲ್ ಮೂಡಲಗುಂಡ, ರಾಮಣ್ಣ ನಾಯಕ ಮದರಕಲ್, ರಮೇಶ ರಾಮನಾಳ, ಬೂದೆಪ್ಪ ಕ್ಯಾದಿಗೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net