ಪ್ರಾದೇಶಿಕ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿ; ಮಾಜಿ ಸಚಿವ ಎನ್.ಎಂ.ನಬಿ ಅಭಿಮತ

19 HBH 01
ಹಗರಿಬೊಮ್ಮನಹಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಸಭೆಯನ್ನು ಪಕ್ಷದ ಕಾರ್ಯಾಧ್ಯಕ್ಷ ಎನ್.ಎಂ.ನಬಿ ಉದ್ಘಾಟಿಸಿದರು. ಪ್ರಮುಖರಾದ ವೈ.ಮಲ್ಲಿಕಾರ್ಜುನ, ಎಲ್.ಪರಮೇಶ್ವರಪ್ಪ, ನಾಣ್ಯಪುರ ಕೃಷ್ಣಮೂರ್ತಿ ಇದ್ದರು.
Published on

ಹಗರಿಬೊಮ್ಮನಹಳ್ಳಿ: ಜೆಡಿಎಸ್ ಪಕ್ಷದಿಂದ ಅಧಿಕಾರ ಪಡೆದು ಪಕ್ಷವನ್ನು ಬಿಟ್ಟು ಹೋಗಿರುವವರಿಗೆ ಸರಿಯಾದ ಪಾಠ ಕಲಿಸಲು ಈ ಬಾರಿ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಎನ್.ಎಂ.ನಬಿ ಕರೆ ನೀಡಿದರು.


ಪಟ್ಟಣದ ಕನ್ನಿಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿ, ಪಕ್ಷದಿಂದ ಸ್ಪರ್ಧಿಸುವ ಕ್ಷೇತ್ರದ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದರು.


ಪ್ರಾದೇಶಿಕ ಪಕ್ಷ ಆಡಳಿತವಿರುವ ಎಲ್ಲ ರಾಜ್ಯಗಳು ಅಭಿವೃದ್ಧಿಯಾಗಿವೆ. ಅದರಂತೆ ಕರ್ನಾಟದಲ್ಲೂ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಜನಸೇವೆ ಮತ್ತು ಉತ್ತಮ ಆಡಳಿತಕ್ಕಾಗಿ ಜೆಡಿಎಸ್ ಎಂದಿಗೂ ಬದ್ಧ. ಪಕ್ಷ ಆಡಳಿತದಲ್ಲಿದ್ದಾಗಲೆಲ್ಲ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ರೈತರ ಸಾಲ ಮನ್ನಾ ಸೇರಿ ಜನಸಾಮಾನ್ಯರಿಗೆ ಪೂರಕವಾಗಿ ಕುಮಾರಸ್ವಾಮಿ ತಮ್ಮ ಆಡಳಿತಾವಧಿಯಲ್ಲಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ತಿಳಿಸಿದರು.


ಜೆಡಿಎಸ್ ಜಿಲ್ಲಾ ಉಸ್ತುವಾರಿ ಮೀನಳ್ಳಿ ತಾಯಣ್ಣ, ರಾಜ್ಯ ಯುವಘಟಕದ ಉಪಾಧ್ಯಕ್ಷ ಎನ್.ಎಂ.ನೂರ್ ಅಹ್ಮದ್, ನಿವೃತ್ತ ಆರ್‌ಟಿಒ ಎಲ್.ಪರಮೇಶ್ವರಪ್ಪ ಮಾತನಾಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಕೊಟ್ರೇಶ್, ಉಪಾಧ್ಯಕ್ಷ ಪಾಂಡುರಂಗಶೆಟ್ಟಿ, ಕೊಟ್ಟೂರು ಬ್ಲಾಕ್ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ಬನ್ನಿಗೋಳ ವೆಂಕಣ್ಣ, ನಾಣ್ಯಪುರ ಕೃಷ್ಣಮೂರ್ತಿ, ಡಿಶ್ ಪಾಂಡುನಾಯ್ಕ, ಮುಕುಂದ, ಸುಭಾನ್ ಸಾಬ್, ರೆಹಮಾನ್ ಸಾಬ್, ಸೋಮಶೇಖರ್, ಟಿಪ್ಪು ಸುಲ್ತಾನ್ ಯುವ ಘಟಕದ ಅಧ್ಯಕ್ಷ ತಳವಾರ ಕೊಟ್ರೇಶ್, ಮಹಿಳಾ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷೆ ಸರಳಾ, ಕ್ಷೇತ್ರಾಧ್ಯಕ್ಷ ವೈ.ಮಲ್ಲಿಕಾರ್ಜುನ, ಶಿವಾನಂದ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net