

ರಾಯಚೂರು ಸಂವಿಧಾನ ಬದಲಾವಣೆ ಮಾಡುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ಖಂಡಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಜಿ¯್ಲÁ ಜೆಡಿಎಸ್ ಪರಿಶಿಷ್ಟ ವಿಭಾಗದ ನೇತೃತ್ವದಲ್ಲಿ ನಗರದ ಡಾ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯಲ್ಲಿ ಜಾದಳ ಜಿ¯್ಲÁಧ್ಯಕ್ಷ ಎಂ ವಿರೂಪಾಕ್ಷಿ ಅವರು ಮಾತನಾಡಿ, ಸಂವಿಧಾನ ಬದಲಾವಣೆ ಮಾಡುªÅÀದಾಗಿ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಸಂವಿದಾನ ತಂಟೆಗೆ ಬಂದರೆ ಪುಡಿ ಪುಡಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಸಂವಿಧಾನ ಬದಲಾವಣೆ ಹೇಳಿಕೆ ನೀಡಿದರೆ ರಾಜ್ಯದ ಜನರು ಚಪ್ಪಲಿ ತೆಗುದುಕೊಂಡು ಹೊಡೆತಾರೆ ಎಂದು ಗುಡುಗಿದರು.
ಆರ್‌ಎಸ್‌ಎಸ್ ಮತ್ತು ಬಿಜೆಪಿ ಅವರು ಸಂವಿಧಾನ ಬದಲಾವಣೆ ಕುತಂತ್ರ ನಡೆದಿದೆ ಎಂದು ರಾಜ್ಯದಲ್ಲಿ ಅಪಪ್ರಚಾರ ನಡೆಸಿ ಕಾಂಗ್ರೆಸ್ ಸರ್ಕಾರ ಸಂವಿಧಾನ ರಕ್ಷಣೆ ಮಾಡುತ್ತಿದೆ ಎಂದು ಹೇಳಿರುವ ಸಂವಿಧಾನ ಬದಲಾವಣೆ ಮಾತು ಕಾಂಗ್ರೆಸ್ ನಿಜ ಬಯಲಾಗಿದೆ ಎಂದರು. ಸಂವಿಧಾನವನ್ನು ಬದಲಾಯಿಸುವ ಮೂಲಕ ಮುಸ್ಲಿಂರಿಗೆ ಮೀಸಲಾತಿ ಪರಿಚಯಿಸುವ ಪ್ರಸ್ತಾಪವನ್ನು ಮುಂದಿಟ್ಟುಕೊAಡು ದೇಶದಲ್ಲಿ ಅಶಾಂತಿ ಸೃಷ್ಟಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದರು.
ದಲಿತ ಹಿಂದುಳಿದ ಜನರನ್ನು ಬಿಜೆಪಿ ಯವರು ಸಂವಿಧಾನವನ್ನು ಬದಲಾಯಿಸುತ್ತಾರೆ. ನಾವು ಸಂವಿಧಾನವನ್ನು ರಕ್ಷಣೆ ಮಾಡುತ್ತೇವೆಂದು ಜನರನ್ನು ನಂಬಿಸಿ ಅಽಕಾರಕ್ಕೆ ಬಂದ ನಂತರ ತನ್ನ ಕಾಂಗ್ರೆಸ್ ನೀಚ ಸಂಸ್ಕೃತಿಯಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾಡಿದರು.
ಈ ಸಂದರ್ಭದಲ್ಲಿ ಪರಿಶಿಷ್ಟ ವಿಭಾಗದ ಅಧ್ಯಕ್ಷ ನರಸಪ್ಪ ಆಶಾಪೂರ, ಜಿಲ್ಲಾ ಕಾರ್ಯಾದ್ಯಕ್ಷ ಶಿವಶಂಕರ ವಕೀಲ, ಸಣ್ಣ ನರಸಿಂಹ ನಾಯಕ, ಲಕ್ಷ್ಮಿಪತಿ ,ತಿಮ್ಮಾರೆಡ್ಡಿ, ರಾಮಕೃಷ್ಣ, ರಾಜು ಎಸ್, ಅದಿದಾಜ, ನರಸಿಂಹಲು ಸೇರಿದಂತೆ ಅನೇಕರು ಇದ್ದರು.