ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

h6-JDS 1
Published on

ಹುಬ್ಬಳ್ಳಿ: ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಜೆಡಿಎಸ್ (ಜಾತ್ಯತೀತ) ಹು-ಧಾ ಮಹಾನಗರ ಹಾಗೂ ಗ್ರಾಮಾಂತರ ಜಿಲ್ಲೆ ನೇತೃತ್ವದಲ್ಲಿ ನಗರದ ಚನ್ನಮ್ಮ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಗ್ಯಾರಂಟಿ ಕೊಡುವ ನೆಪದಲ್ಲಿ ರಾಜ್ಯ ಸರ್ಕಾರ ಜನರ ಮೇಲೆ ಹೊರೆ ಹಾಕುತ್ತಿದೆ. ಬಸ್ ಪ್ರಯಾಣ ದರ ಹೆಚ್ಚಳ ಮಾಡಿ ಮತ್ತಷ್ಟು ತೊಂದರೆ ಕೊಡುತ್ತಿದೆ. ಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿ, ನಂತರ ದರ ಹೆಚ್ಚಳ ಮಾಡಿ ಹಿಂದುಗಡೆಯಿಂದ ಹಣ ವಸೂಲು ಮಾಡುತ್ತಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಹೆಚ್ಚಿಸಿರುವ ಪ್ರಯಾಣ ದರ ಇಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ನಂತರ ಹು-ಧಾ ಮಹಾನಗರ ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿರುವ ಪೌರ ಕಾರ್ಮಿಕರ ಬಳಿ ತೆರಳಿ ಬೆಂಬಲ ಸೂಚಿಸಲಾಯಿತು.

ಮಹಾನಗರ ಜಿಲ್ಲಾದ್ಯಕ್ಷ ಗುರುರಾಜ ಹುಣಸಿಮರದ, ಗ್ರಾಮಾಂತರ ಜಿಲ್ಲಾದ್ಯಕ್ಷ ಬಿ.ಬಿ. ಗಂಗಾಧರಮಠ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಪಾಲಿಕೆ ಸದಸ್ಯೆ ಲಕ್ಷ್ಮೀ ಹಿಂಡಸಗೇರಿ, ಮುಖಂಡರಾದ ಪ್ರಕಾಶ ಅಂಗಡಿ, ಜಾಫರ್ ಕ್ಯಾಲಕೋಂಡ, ವಿನಾಯಕ ಗಾಡಿವಡ್ಡರ, ಗುರು ನಾಯ್ಕರ, ಶಂಕರಗೌಡ ದೊಡ್ಡಮನಿ, ಅಹ್ಮದ್ ಅರಸಿಕೇರೆ, ಶಂಕರ ಪವಾರ, ಶ್ರೀಕಾಂತ ತೆಲಗರ, ದೊಡ್ಡಪ್ಪ ಧರಣಿ, ಸಿದ್ದು ಮಹಾಂತಒಡೆಯರ, ನಾಗರಾಜ ಗುಡದರಿ, ಶ್ರೀಶೈಲ ಮೂಲಿಮನಿ, ಪುನೀತ ಅಡಗಲ್ಲ, ಗುರಯ್ಯ ವಿರಕ್ತಿಮಠ, ಬಸವರಾಜ ಕುರಟ್ಟಿಮಠ, ಪೂರ್ಣಿಮಾ ಸವದತ್ತಿ, ಪೂಜಾ ಮೆಣಸಿನಕಾಯಿ, ವೀರೇಶ ಕುಬಸದ, ಮಲ್ಲಪ್ಪ ನವಲೂರ, ಬಸವರಾಜ ಹರವಿ, ಗೋಪಾಲ ನಿರಣಕಿ, ನವೀನಕುಮಾರ ಮಡಿವಾಳರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net