ಹುಬ್ಬಳ್ಳಿ: ಬಸ್ ಟಿಕೆಟ್ ದರ ಹಾಗೂ ಇತರ ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಜನತಾದಳ ಜಾತ್ಯತಿತ ಪಕ್ಷದ ವತಿಯಿಂದ ಜ. 6ರಂದು ಮಧ್ಯಾಹ್ನ 12ಕ್ಕೆ ಚನ್ನಮ್ಮ ಮೈದಾನ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಪಾಲಿಕೆ ಕಚೇರಿ ಎದುರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ಕುಳಿತಿರುವ ಪೌರ ಕಾಮಿರ್ಕರ ಹೋರಾಟಕ್ಕೂ ಬೆಂಬಲ ಸೂಚಿಸಲಾಗುವುದು.
ಪ್ರತಿಭಟನೆಯಲ್ಲಿ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಬಿ. ಗಂಗಾಧರಮಠ, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳುವರು ಎಂದು ನಿಕಟ ಪೂರ್ವ ಜಿಲ್ಲಾ ಕಾರ್ಯದರ್ಶಿ ನವೀನಕುಮಾರ ತಿಳಿಸಿದ್ದಾರೆ.