ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಬೇಡ ; ವಿರೋಧ ಪಕ್ಷಗಳಿಗೆ ಜೆಡಿಎಸ್ ಮುಖಂಡ ಕೃಷ್ಣಮೂರ್ತಿ ಸಲಹೆ

7 RMN-MGD P2
Published on

ಮಾಗಡಿ: ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ವಿರೋಧ ಪಕ್ಷದವರು ಅಡ್ಡಿಪಡಿಸುವುದು ಬೇಡ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ ಸಲಹೆ ನೀಡಿದರು.

ಪಟ್ಟಣದ ಜೆಡಿಎಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾತನಾಡಿದರೆ ಸಾಕು ಜಾಲತಾಣಗಳಲ್ಲಿ ಶಾಸಕರನ್ನು ಬಹಿರಂಗ ಚರ್ಚೆಗೆ ಎನ್ನಿ ಎನ್ನುವುದು ಎಷ್ಟು ಸರಿ. ಶಾಸಕ ಸ್ಥಾನಕ್ಕೆ ಅದರದೇ ಆದ ಗೌರವವಿದೆ. ಪತ್ರ ಮುಖೇನ ಅಥವಾ ಖುದ್ದು ಭೇಟಿ ಮಾಡಿಯೂ ಸಿಗದಿದ್ದರೆ ಚರ್ಚೆ ಮಾಡಬಹುದು. ಎಲ್ಲೋ ಕುಳಿತು ಬಹಿರಂಗ ಚರ್ಚೆಗೆ ಆಹ್ವಾನಿಸುವುದು ಬೇಡ. ಚುನಾವಣೆ ಸಮಯದಲ್ಲಿ ಯಾರು ಏನೇನು ಕೆಲಸ ವಾಡಿದ್ದಾರೆ ಎಂದು ಜನರಿಗೆ ತಿಳಿಸಿದರೆ ಅವರೇ ತಿರ್ವಾನಿಸುತ್ತಾರೆ. ಈ ಮಧ್ಯೆ ಕಲುಷಿತ ವಾತಾವರಣ ಸೃಷ್ಟಿಸುವುದು ಬೇಡ ಎಂದು ವಿರೋಧ ಪಕ್ಷದವರ ವಿರುದ್ದ ಕಿಡಿಕಾರಿದರು.

ಶಾಸಕ ಸ್ಥಾನಕ್ಕೆ ಅದರದೇ ಆದ ಗೌರವವಿದೆ: ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ 4 ಬಾರಿ ಶಾಸಕರಾಗಿದ್ದವರು. ತಾಲೂಕಿನಲ್ಲಿ ಅವರಿಗೆ ಗೌರವವಿದೆ, ಒಳ್ಳೆತನವೂ ಇದೆ. ಆದರೆ ಬೆಂಬಲಿಗರ ಮಾತು ಕೇಳಿ ದುಡುಕುವುದು ಬೇಡ. ಅವರಿಂದಾಗಿಯೇ ಕೆಟ್ಟ ಹೆಸರು ಬರುತ್ತಿದೆ. ಶಾಸಕ ಮಂಜುನಾಥ್ ಕೂಡ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿಯಲ್ಲಿ ಲೋಪವಾಗಿದ್ದರೆ, ಕಳಪೆ ಕೆಲಸವಾಗಿದ್ದರೆ ವಿರೋಧ ಪಕ್ಷದವರು ಚರ್ಚೆ ಮಾಡಲಿ. ಉತ್ತರ ಕೊಡುತ್ತೇವೆ. ಅದು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ವಿರುದ್ದ ಕೆಟ್ಟದಾಗಿ ನಿಂದನೆ ಮಾಡುವುದು ಸರಿಯಲ್ಲ. ಜಾಲತಾಣಗಳಲ್ಲಿ ನಿಂದಿಸುವ ಕೆಲಸ ನಿಲ್ಲಲಿ. ನಮ್ಮ ತಾಳ್ಮೆಯನ್ನು ಕೆಣಕುವುದು ಬೇಡ ಎಂದು ಕೃಷ್ಣಮೂರ್ತಿ ಎಚ್ಚರಿಸಿದರು.

ತಾ.ಪಂ. ಮಾಜಿ ಸದಸ್ಯ ವೆಂಕಟೇಶ್ ಮಾತನಾಡಿ, ರಾಜಕಾರಣಿಗಳಲ್ಲಿ ವೈಯಕ್ತಿಕ ದ್ವೇಷ ಎಷ್ಟೇ ಇದ್ದರೂ, ಮಾಡುವ ಕೆಲಸಗಳು ಮತಗಳಾಗಿ ಪರಿವರ್ತನೆಯಾಗಬೇಕು. ಇನ್ನೊಂದು ವರ್ಷದಲ್ಲಿ ಒಂದು ಲೈನ್ ಮೂಲಕ ಕೆರೆಗಳಿಗೆ ಹೇವಾವತಿ ನೀರು ಬರುತ್ತದೆ, ಲಿಂಕ್ ಕೆನಾಲ್ ಇಲ್ಲದಿದ್ದರೂ ನೀರು ತರಲು ಸಾಧ್ಯ ಎಂದರು.

ಜೆಡಿಎಸ್ ಅಧ್ಯಕ್ಷ ಪೊಲೀಸ್ ರಾಮಣ್ಣ ಮಾತನಾಡಿ, ಕೈಗಾರಿಕೆ, ಹೇವಾವತಿ ಯೋಜನೆಗಳು ಕೇವಲ ಒಬ್ಬರಿಂದ ಸಾಧ್ಯವಿಲ್ಲ. ಎಲ್ಲರ ಸಹಕಾರ ಬೇಕು. ಇದಕ್ಕೆ ಮಾಜಿ ಶಾಸಕರು ಕೈಜೋಡಿಸಬೇಕು. ಅಭಿವೃದ್ದಿ ರಾಜಕಾರಣ ಬೇಡ. ವಾಜಿ ಶಾಸಕರಿಗೆ ದೇವರು ಸದ್ಬುದ್ದಿ ಕೊಡಲಿ ಎಂದರು.

ಪುರಸಭೆ ಉಪಾಧ್ಯಕ್ಷ ರೆಹಮತ್, ಸದಸ್ಯರಾದ ಎಂ.ಎನ್. ಮಂಜುನಾಥ್, ಜಯರಾಮಣ್ಣ, ಅನಿಲ್ ಕುವಾರ್, ಮಾಜಿ ಅಧ್ಯಕ್ಷ ಪಿ.ವಿ. ಸೀತಾರಾಂ, ಮಾಜಿ ಸದಸ್ಯ ರೂಪೇಶ್, ನಯಾಜ್, ಜೆಡಿಎಸ್ ಮಾಜಿ ಅಧ್ಯಕ್ಷ ಗುಡ್ಡೇಗೌಡ, ಮಹಿಳಾ ಅಧ್ಯಕ್ಷೆ ಶೈಲಜಾ, ಎಪಿಎಂಸಿ ನಿರ್ದೆಶಕ ಕೆ.ಟಿ.ಮಂಜುನಾಥ್, ಕೆಡಿಪಿ ಸದಸ್ಯ ನಾಗರಾಜು, ಟಿಎಪಿಸಿಎಂಎಸ್ ವಾಜಿ ಅಧ್ಯಕ್ಷ ತಮ್ಮಣಗೌಡ, ವಾಟರ್ ಬೋರ್ಡ್ ರಾಮಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net