ಇದಕ್ಕೆ ಪೂರಕವೆಂಬಂತೆ ಕೆ.ವಿ.ಶಂಕರಗೌಡರ ಮೊಮ್ಮಗ ಪಿಇಟಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಜೆಡಿಎಸ್ ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ, ಜಿ.ಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್ ಕ್ಷೇತ್ರದಲ್ಲಿ ಸಕ್ರಿಯರಾಗಿ ಮತದಾರರನ್ನು ತಲುಪುವ ಕೆಲಸ ಮಾಡುತ್ತಿದ್ದರು. ಅದರಲ್ಲಿಯೂ ರಾಮಚಂದ್ರು ಹಾಗೂ ಯೋಗೇಶ್ ಧರ್ಮಯಾತ್ರೆ ಹೆಸರಿನಲ್ಲಿ ಸಾವಿರಾರೂ ಜನರನ್ನು ಪ್ರವಾಸ ಮಾಡಿಸಿದ್ದರು. ಇತ್ತ ಕೆ.ವಿ.ಶಂಕರಗೌಡರ ಕುಟುಂಬಕ್ಕೆ ಅವಕಾಶ ನೀಡುತ್ತಾರೆನ್ನುವ ಬಗ್ಗೆಯೂ ಮಾತಿತ್ತು. ಆದರೆ ಅಚ್ಚರಿ ಎಂಬಂತೆ ಹಾಲಿ ಶಾಸಕರಿಗೆ ಅವಕಾಶ ನೀಡಲಾಗಿದೆ.