ಪ್ರತಿ ವಾರ್ಡಿನಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ

jds
ಸಂಜಯ್ ಕಶ್ಯಪ್, ಯುವ ಜೆಡಿಎಸ್ ಶಿವಮೊಗ್ಗ ನಗರಾಧ್ಯಕ್ಷ
Published on

ಶಿವಮೊಗ್ಗ: ಜೆಡಿಎಸ್ ನಗರ ಘಟಕದಿಂದ ಸದಸ್ಯತ್ವ ಅಭಿಯಾನ ಚುರುಕುಗೊಳಿಸಲಾಗಿದೆ. ನಗರಾಧ್ಯಕ್ಷ ದೀಪಕ್ ಸಿಂಗ್ ನೇತೃತ್ವದಲ್ಲಿ 32 ವಾರ್ಡ್‌ಗಳಲ್ಲೂ ಅಭಿಯಾನಕ್ಕೆ ವೇಗ ನೀಡಲಾಗಿದೆ ಎಂದು ಜೆಡಿಎಸ್ ಯುವ ಘಟಕದ ನಗರಾಧ್ಯಕ್ಷ ಸಂಜಯ್ ಎಸ್.ಕಶ್ಯಪ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ವಾರ್ಡ್‌ಗಳಲ್ಲೂ ಸಮಿತಿ ರಚಿಸಲಾಗಿದೆ. ವಾರ್ಡ್ ಅಧ್ಯಕ್ಷರ ನೇಮಕ ಮಾಡಲಾಗಿದೆ. 288 ಬೂತ್‌ಗಳಿದ್ದು, 30 ಸಾವಿರ ಸದಸ್ಯರನ್ನು ನೋಂದಣಿ ಮಾಡಿಸುವ ಗುರಿಯಿದೆ ಎಂದು ಹೇಳಿದರು
ಪ್ರಮುಖರಾದ ನಿಹಾಲ್ ಖಾನ್, ಆದಿತ್ಯನ್ ಮೊದಲಿಯಾರ್, ಕೃಷ್ಣ, ಅರುಣ್, ವಸಂತ್, ಸೂರಜ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net