ಹುಬ್ಬಳ್ಳಿ: ಜನತಾದಳ ಜಾತ್ಯತಿತ ಧಾರವಾಡ ಗ್ರಾಮಾಂತರ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲೆಯ ಪಕ್ಷದ ಸಭೆಯನ್ನು ಸೆ. 6ರಂದು ಮಧ್ಯಾಹ್ನ 3ಕ್ಕೆ ನಗರದ ಸರ್ಕಿಟ್ ಹೌಸ್ ನಲ್ಲಿ ಏರ್ಪಡಿಸಲಾಗಿದೆ.
ಗ್ರಾಮಾಂತರ ಜಿಲ್ಲೆ ಅಧ್ಯಕ್ಷ ಬಿ.ಬಿ. ಗಂಗಾಧರಮಠ ಹಾಗೂ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಅಧ್ಯಕ್ಷತೆ ವಹಿಸುವರು.
ಪಕ್ಷದ ಧಾರವಾಡ ಜಿಲ್ಲೆಯ ಉಸ್ತುವಾರಿ ನಾಸಿರುದ್ದೀನ್ ಭಾಗವಾನ, ಶಂಕರ ಮಾಳಗಿ, ಶಂಕರ ಬಾಳಿಕಾಯಿ, ಸೌರಭ ಚೋಪ್ರಾ ಅವರು ಸಭೆಯಲ್ಲಿ ಪಾಲ್ಗೊಂಡು ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುವರು.
ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳಲು ನವೀನಕುಮಾರ ಮನವಿ ಮಾಡಿದ್ದಾರೆ.