ಕಾಂಗ್ರೆಸ್​ ವಿರುದ್ಧ ಜಿಲ್ಲಾ ಜೆಡಿಎಸ್​ ಟೀಕಾ ಪ್ರಹಾರ

31GDG05
Published on

ವಿಜಯವಾಣಿ ಸುದ್ದಿಜಾಲ ಗದಗ
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಗ್ಯಾರಂಟಿ ಯೋಜನೆಗಳ ಹೊಡೆತಕ್ಕೆ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ ಎಂದು ರಾಜ್ಯ ಜೆಡಿಎಸ್​ ಕಾರ್ಯಾಧ್ಯಕ್ಷ, ಮಾಜಿ ಸಚಿವ ಆಲ್ಕೊಡ ಹನುಮಂತಪ್ಪ ಕಾಂಗ್ರೆಸ್​ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದರು.
ಜಿಲ್ಲಾ ಜೆಡಿಎಸ್​ ಕಚೇರಿಯಲ್ಲಿ ಸೋಮವಾರ ಕಾರ್ಯಕರ್ತರ ಸಭೆಯ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿದ್ದು ಗ್ಯಾರಂಟಿ ಯೋಜನೆಗಳ ಮುಖಾಂತರ ಅಭಿವೃದ್ಧಿಗೆ ಅನುದಾನವೇ ಇಲ್ಲ. ಮಾಜಿ ಸಿಎಂ ಕುಮಾರಣ್ಣ ಅವರ ಪಂಚ ರತ್ನ ಯೋಜನೆ ಮಾಹಿತಿ ಜನತೆಗೆ ತಲುಪಿಸಲು ಕಾರ್ಯಕರ್ತರು ಬಹಳ ಪ್ರಯತ್ನ ಪಟ್ಟರೂ ಸಾಕಾರಗೊಳ್ಳಲಿಲ್ಲ ಎಂದರು.
ಜಿಲ್ಲೆಯಲ್ಲಿ ಪಕ್ಷ ಸಂಟನೆಗೆ ಒತ್ತು ನೀಡುವ ಕುರಿತು ಮಾತನಾಡಿದ ಆಲ್ಕೊಡ್​ ಹನುಮಂತಪ್ಪ, ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅನೇಕ ಜನ ಆಕಾಂಕ್ಷಿಗಳಿದ್ದಾರೆ. ಆದರೆ ಜಿಲ್ಲಾಧ್ಯಕ್ಷ ಸ್ಥಾನಕ್ಕಿಂತ ತಾಲೂಕ ಅಧ್ಯಕ್ಷರ ಜವಾಬ್ದಾರಿ ಬಹಳ ಮುಖ್ಯ. ಆದ್ದರಿಂದ ಮೊದಲು ತಾಲೂಕ ಅಧ್ಯಕ್ಷರ ಆಯ್ಕೆ ಮಾಡಲು ಎಲ್ಲ ತಾಲೂಕಿಗೆ ಭೇಟಿ ನೀಡಿ ತಾಲೂಕು ಸಭೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಶಿಕ್ಷಕರ ಘಟಕದ ರಾಜ್ಯಾಧ್ಯಕ್ಷ ಶ್ರೀಶೈಲ್ ಗಡದಿನ್ನಿ ಗದಗ ಜಿಲ್ಲಾ ಮಾಜಿ ಅಧ್ಯಕ್ಷ ಅಂದಾನಯ್ಯ ಕುರ್ತುಕೋಟಿಮಠ, ಎಂ ಆರ್, ಸೋಂಪೂರ, ಪಿ ಸಿ ಹಿರೇಮನಿ, ಶಂಕರ ಬಾಳಿಕಾಯಿ, ಪಾಟೀಲ, ಸಿ ಎಸ್, ಪಾಟೀಲ, ಹೆಚ್ ಎನ್, ಹಳಕಟ್ಟಿ, ಶ್ರೀಪಾದ ಆನೆಗುಂದಿ, ಡಾ. ಎಸ್ ಆರ್, ಹಿರೇಮಠ, ಹಾಜಿ ಅಲಿ ಕೊಪ್ಪಳ,ಮಂಜುಳಾ ಮೇಟಿ, ಪ್ರವೀಣ ಬಾಳಿಕಾಯಿ, ತಾಲೂಕ ಅಧ್ಯಕ್ಷರುಗಳಾದ ಬಸವರಾಜ ಅಪ್ಪಣ್ಣವರ, ಎಂ ವೈ ಮುಧೋಳ, ವಿಜಯಪ್ಪ ಸಳುಂಕೆ, ಜೆ ಕೆ ಕೊಳ್ಳಿಮಠ, ಮುಖಂಡರಾದ ಅಶೋಕ ತ್ಯಾಮನವರ, ಸುಭಾಷ ದಾನರೆಡ್ಡಿ, ವಸಂತ ಇಂಜಿನಿ, ಶಿರಾಜ ಕದಡಿ, ತಿಪ್ಪಣ್ಣ ಹುಡೇದ, ಎಲ್ಲಪ್ಪ ಜಿಡ್ಡಿ, ಮಾಂತೇಶ ಕಣವಿ, ಪ್ರಭುರಾಜಗೌಡ ಪಾಟೀಲ, ಅಬ್ದುಲ ನರಸಾಪೂರ, ಲಕ್ಷ್ಮಣ ನಾಯಕ, ವೀರಭದ್ರಪ್ಪ ಅಕ್ಕಿ, ವಿನಾಯಕ್ ಪರಭತ, ಪ್ರಕಾಶ ದೊಡ್ಡಮನಿ, ಎಲ್ಲಪ್ಪ ಹೂಗಾರ, ಸಂಗಪ್ಪ ಎಲ್ಬುಣಚಿ,ರಫೀಕ ಹವಾಲ್ದಾರ, ದೇವೇಂದ್ರ ಸೂಲಿ, ಜಿ ಏ. ಬುರುಡಿ, ಮಂಜುನಾಥ ದೊಡ್ಮನಿ, ಶಶಿ ಸಾಳುಂಕೆ, ದೇವೇಂದ್ರಪ್ಪ ಮಲಸಮುದ್ರ, ಪ್ರಫುಲ ಪುಣೆಕರ, ಕುರುಡಗಿ, ಸೋಯಿಲ ನಾಗನೂರ, ಲಕ್ಷ್ಮಣ ತಳವಾರ, ಬಸವರಾಜ ಜರ್ಲಿ ಅನೇಕರು ಉಪಸ್ಥಿತರಿದ್ದರು ಎಂದು ಗದಗ ಜಿಲ್ಲಾ ಜೆಡಿಎಸ್ ವಕ್ತಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net