ಏ.2ರಂದು ಮಂಡ್ಯ ನಗರದಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರ ಸಭೆ: ಮಾ.31ರಂದು ಪೂರ್ವಭಾವಿ ಸಭೆ ಮಾಹಿತಿ ವಿವರಿಸಿದ ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು

JDS leader press conference on workers' meeting mandya
Published on

ಮಂಡ್ಯ: ಲೋಕಸಭೆ ಚುನಾವಣೆ ಸಂಬಂಧ ಏ.1ರಂದು ನಗರದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಬೃಹತ್ ಸಭೆ ಏರ್ಪಡಿಸಲಾಗಿದೆ ಎಂದು ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ತಿಳಿಸಿದರು.
ಕಾಳಿಕಾಂಬ ಸಮುದಾಯ ಭವನದಲ್ಲಿ ಅಂದು ಮಧ್ಯಾಹ್ನ 1 ಗಂಟೆಗೆ ಸಭೆ ಆರಂಭಗೊಳ್ಳಲಿದೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಸೇರಿದಂತೆ ಬಿಜೆಪಿಯ ರಾಜ್ಯ ಮಟ್ಟದ ಹಲವು ನಾಯಕರು ಭಾಗವಹಿಸುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಭೆಗೆ ಪೂರಕವಾಗಿ ಮಾ.31ರಂದು ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಈ ಸಭೆಗಳಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಕಾರ್ಯಕರ್ತರು, ಜನಸಾಮಾನ್ಯರಿಗೆ ಮಾಹಿತಿ ನೀಡಿ ಒಟ್ಟಾಗಿ ಚುನಾವಣೆ ನಡೆಸಿಕೊಂಡು ಹೋಗುವ ಬಗ್ಗೆ ತಿಳಿಸಲಾಗುವುದು. ಈ ಸಭೆಗಳಿಗೆ ಬಂದವರನ್ನು ಏ.2ರ ಸಭೆಗೆ ಆಹ್ವಾನಿಸಲಾಗುವುದು. ಅವರೊಂದಿಗೆ ಇತರ ಕಾರ್ಯಕರ್ತರನ್ನು ಕರೆತರಲು ಸಜ್ಜುಗೊಳಿಸಲಾಗುವುದು ಎಂದರು.
ಮಾ.31ರAದು ಬೆಳಗ್ಗೆ 8ಕ್ಕೆ ಮಂಡ್ಯ ತಾಲೂಕು ಹುಲಿವಾನ ಗ್ರಾಮದ ಅಂಬಾ ರೈಸ್‌ಮಿಲ್ ಆವರಣದಲ್ಲಿ ಕೆರೆಗೋಡು ಹೋಬಳಿ ಕಾರ್ಯಕರ್ತರ ಸಭೆ, ಬೆಳಗ್ಗೆ 11ಗಂಟೆಗೆ ಹನುಗನಹಳ್ಳಿ ಗೇಟ್ ಬಳಿ ಬಸರಾಳು ಹೋಬಳಿ ಕಾರ್ಯಕರ್ತರ ಸಭೆ ಹಾಗೂ ಸಂಜೆ 5ಗಂಟೆಗೆ ಮಂಡ್ಯ ನಗರದ ಕಲ್ಲಹಳ್ಳಿಯ ನಾಗಸಿರಿ ಕಲ್ಯಾಣ ಮಂಟಪದಲ್ಲಿ ಮಂಡ್ಯ ಸಿಟಿ ಹಾಗೂ ಮಂಡ್ಯ ಕಸಬಾ ಹೋಬಳಿ ಕಾರ್ಯಕರ್ತರು, ಮುಖಂಡರ ಸಭೆ ನಡೆಸಲಾಗುವುದು ಎಂದು ವಿವರಿಸಿದರು.
ಮನ್‌ಮುಲ್ ಉಪಾಧ್ಯಕ್ಷ ಎಂ.ಎಸ್.ರಘುನಂದನ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಜೆ.ಅಶೋಕ್ ಜಯರಾಂ, ತಾಲೂಕು ಜೆಡಿಎಸ್ ಅಧ್ಯಕ್ಷ ಬೂದನೂರು ಸ್ವಾಮಿ, ನಗರಸಭೆ ಸದಸ್ಯ ನಾಗೇಶ್, ಮೈತ್ರಿ ಪಕ್ಷದ ಮುಖಂಡರಾದ ಎಚ್.ಆರ್.ಅರವಿಂದ್, ಸಾತನೂರು ಭೀಮೇಶ್, ಮಹಮ್ಮದ್, ವಸೀಂ, ದಸ್ತಗಿರ್, ಮಾರಗೌಡನಹಳ್ಳಿ ವಸಂತರಾಜ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net