

ಕಿಕ್ಕೇರಿ: ಕೆ.ಆರ್.ಪೇಟೆ ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಗಟ್ಟಿಯಾಗಿದೆ. ಕಾರ್ಯಕರ್ತರಲ್ಲಿ ಒಗ್ಗಟ್ಟಿದ್ದು ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವಂತೆ ಶಾಸಕ ಎಚ್.ಟಿ. ಮಂಜು ಮನವಿ ಮಾಡಿದರು.
ಇಲ್ಲಿನ ಪ್ರವಾಸಿ ಮಂದಿರ ಆವರಣದಲ್ಲಿ ಆಯೋಜಿಸಿದ್ದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿಗಳ ಪರ ಮತಯಾಚಿಸಿ ಮಾತನಾಡಿ, ಷೇರುದಾರ ಹಾಗೂ ಸೊಸೈಟಿ ಪ್ರತಿನಿಧಿ ಮತದಾರರು ಈ ಬಾರಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ. ರೈತರ ಅಭ್ಯುದಯಕ್ಕೆ ಶಕ್ತಿ ಮೀರಿ ಕೆಲಸ ಮಾಡಲಾಗುವುದು. ತಮ್ಮಲ್ಲಿ ಯಾರೊಬ್ಬರೂ ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಅಧಿಕಾರ ಶಾಶ್ವತವಲ್ಲ, ಜನಸೇವೆ ಮುಖ್ಯ ಎಂದು ದುಡಿಯುವುದಾಗಿ ಹೇಳಿದರು.
ಜೆಡಿಎಸ್ ಹಿರಿಯ ಮುಖಂಡ ಸಿ.ಎನ್. ಪುಟ್ಟಸ್ವಾಮಿಗೌಡ, ರಾಜ್ಯ ಸಹಕಾರ ಮಹಾಮಂಡಳದ ಪ್ರಾದೇಶಿಕ ನಿರ್ದೇಶಕ ಎಸ್.ಎಲ್. ಮೋಹನ್ ಮಾತನಾಡಿದರು. ಬಿ. ವರ್ಗದ ಅಭ್ಯರ್ಥಿಗಳಾದ ಎಸ್.ಎಲ್. ಮೋಹನ್, ಮಲ್ಲೇನಹಳ್ಳಿ ಎಂ.ಮೋಹನ್, ಕಿಕ್ಕೇರಿ ಕೆ.ಬಿ. ಮಧು, ನಾಗರಘಟ್ಟ ದಿಲೀಪ್‌ಕುಮಾರ್, ಎಂ.ಡಿ. ಜ್ಯೋತಿ, ಬಿ.ಆರ್. ಲತಾಮಣಿ ಮಂಜುನಾಥ್, ರಂಗನಾಥಪುರ ನಾಗರಾಜು, ಬೊಮ್ಮೇನಹಳ್ಳಿ ಮಂಜುನಾಥ್, ಎ. ವರ್ಗದ ಅಭ್ಯರ್ಥಿಗಳಾದ ಟಿ. ಬಲದೇವ್, ಬಿ.ಎಂ. ಕಿರಣ್, ಕುರುಬಹಳ್ಳಿ ಕೆ.ಬಿ. ನಾಗೇಶ್, ಎ.ಟಿ. ಕರಿಶೆಟ್ಟಿ, ಎಚ್.ಟಿ. ಲೋಕೇಶ್, ಮುಖಂಡರಾದ ಐಕನಹಳ್ಳಿ ಕೃಷ್ಣೇಗೌಡ, ಐನೋರಹಳ್ಳಿ ಮಲ್ಲೇಶ್, ಶೇಖರ್, ಅಕ್ಕಿಹೆಬ್ಬಾಳು ರಘು, ಮಹಾದೇವೇಗೌಡ, ಚಂದ್ರಶೇಖರ್, ಐ.ಡಿ. ಉದಯ್, ಎಂ.ಸಿ.ರಾಮೇಗೌಡ, ಮೋಹನ್, ರಾಜು, ಎ.ಪಿ. ಕೇಶವಗೌಡ, ಬೇಲದಕೆರೆ ನಂಜಪ್ಪ, ಎಸ್.ಆರ್. ನವೀನ್‌ಕುಮಾರ್, ಚಂದ್ರಹಾಸ ಇತರರು ಇದ್ದರು.