ಜೆಡಿಎಸ್ ಜನರ ವಿಶ್ವಾಸವನ್ನು ಕಳೆದುಕೊಂಡಿದೆ

SUDHANA S IRAPPA
Published on

ಮಡಿಕೇರಿ: ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣದ ನಂತರ ರಾಜ್ಯದಲ್ಲಿ ಜಾತ್ಯತೀತ ಜನತಾದಳ ಸಂಪೂರ್ಣವಾಗಿ ಜನರ ವಿಶ್ವಾಸವನ್ನು ಕಳೆದುಕೊಂಡಿದ್ದು, ಈ ಪಕ್ಷವನ್ನು ವಿಸರ್ಜಿಸುವುದು ಸೂಕ್ತವೆಂದು ಕೊಡಗು ಜಿಲ್ಲಾ ಜೆಡಿಎಸ್ ಮಾಜಿ ವಕ್ತಾರ ಸೂದನ ಎಸ್.ಈರಪ್ಪ ಅಭಿಪ್ರಾಯಪಟ್ಟಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಂಸದ ಪ್ರಜ್ವಲ್ ಹಾಗೂ ಶಾಸಕ ಎಚ್.ಡಿ.ರೇವಣ್ಣ ಅವರ ವಿರುದ್ಧ ಗಂಭೀರವಾದ ಆರೋಪಗಳು ಕೇಳಿ ಬಂದಿದ್ದು, ಇದು ಜೆಡಿಎಸ್ ಪಕ್ಷಕ್ಕೆ ಮತ್ತು ಕಾರ್ಯಕರ್ತರಿಗೆ ಮುಜುಗರವನ್ನುಂಟು ಮಾಡಿದೆ. ಯಾವುದೇ ಕಾರಣಕ್ಕೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸತ್ಯದ ಪರ ನಿಲ್ಲಬೇಕೆ ಹೊರತು ತಮ್ಮ ಕುಟುಂಬದ ಪರ ನಿಲ್ಲಬಾರದು ಎಂದು ಒತ್ತಾಯಿಸಿದ್ದಾರೆ.


ರಾಜ್ಯದ ಜನ ಪಕ್ಷದ ಮೇಲಿಟ್ಟಿದ್ದ ಅಭಿಮಾನಕ್ಕೆ ದ್ರೋಹವಾಗಿದೆ. ಅದರಲ್ಲೂ ಮಹಿಳಾ ಸಮೂಹಕ್ಕೆ ಅವಮಾನವಾಗಿದೆ. ಪ್ರಕರಣದ ಉನ್ನತ ಮಟ್ಟದ ತನಿಖೆಯಿಂದಷ್ಟೇ ಸತ್ಯ ಬಯಲಾಗಲಿದೆ. ಜನ ಬೆಂಬಲ ಕಳೆದುಕೊಂಡ ಪಕ್ಷವನ್ನು ತಕ್ಷಣ ವಿಸರ್ಜಿಸಬೇಕೆಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net