ಜೆಡಿಎಸ್ ಜಿಲ್ಲಾಧ್ಯಕ್ಷರ ಪತ್ನಿ ಗೀತಾ ಕಾಂಗ್ರೆಸ್‌ಗೆ

mdg jds
ಪಪಂ ಜೆಡಿಎಸ್ ಸದಸ್ಯೆ ಗೀತಾ ರಂಜನ್ ಅಜಿತ್‌ಕುಮಾರ್ ಅವರು ಶಾಸಕಿ ನಯನಾ ಮೋಟಮ್ಮ ಅವರಿಂದ ಕಾಂಗ್ರೆಸ್ ಧ್ವಜ ಪಡೆಯುವ ಮೂಲಕ ಪಕ್ಷಕ್ಕೆ ಸೇರ್ಪಡೆಯಾದರು. ಎಚ್.ಜಿ.ಸುರೇಂದ್ರ, ವೆಂಕಟೇಶ್, ಎಚ್.ಪಿ.ರಮೇಶ್, ಎಂ.ಎ.ಹಂಝ, ಖುರ್ಷಿದಾ ಭಾನು, ಬಿ.ಎಸ್.ಜಯರಾಂ, ಸಿ.ಕೆ.ಇಬ್ರಾಹಿಂ, ಅಕ್ರಮ್ ಹಾಜಿ ಇತರರಿದ್ದರು.
Published on

ಮೂಡಿಗೆರೆ: ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್ ಅವರ ಪತ್ನಿ, ಪಟ್ಟಣ ಪಂಚಾಯಿತಿ ಜೆಡಿಎಸ್ ಏಕಮಾತ್ರ ಸದಸ್ಯೆ ಗೀತಾ ಅವರು ಶುಕ್ರವಾರ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಪಪಂ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದೆ. ಕೆಲ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಈ ಹಿಂದಿನ ಎರಡೂವರೆ ವರ್ಷದ ಅವಧಿಯಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು. ಜೆಡಿಎಸ್ ಸದಸ್ಯೆ ಗೀತಾ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದರಿಂದ ಪಪಂನಲ್ಲಿ ಪಕ್ಷಕ್ಕೆ ಇನ್ನಷ್ಟು ಬಲ ಬಂದಿದೆ. ಈ ಬಾರಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಭರವಸೆ ಇದೆ. ಪಪಂ ಕಾಂಗ್ರೆಸ್ ಸದಸ್ಯರು ಅಧಿಕಾರಕ್ಕಾಗಿ ಆಸೆಪಡುವವರಲ್ಲ. ಯಾವ ವಿಚಾರದಲ್ಲೂ ಸದಸ್ಯರು ಭಿನ್ನಮತ ಮಾಡಿಕೊಳ್ಳದೆ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಪಕ್ಷಕ್ಕೆ ಸೇರ್ಪಡೆಯಾದ ಗೀತಾ ಮಾತನಾಡಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನಾಯಕತ್ವವನ್ನು ದೇಶದ ಜನ ಒಪ್ಪಿಕೊಂಡಿದ್ದಾರೆ. ಜಾತ್ಯತೀತ ಪಕ್ಷವಾಗಿರುವ ಕಾರಣ ಜನರ ಹುರುಪು ಕಾಂಗ್ರೆಸ್‌ನತ್ತ ಹೆಚ್ಚಾಗುತ್ತಿದೆ. ಪಕ್ಷದ ಸಿದ್ಧಾಂತದಲ್ಲಿ ನಂಬಿಕೆಯಿಟ್ಟು ನಾನು ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಎಲ್ಲ ಧರ್ಮೀಯರನ್ನು ಒಗ್ಗೂಡಿಸುವ ಸಾಮರ್ಥ್ಯ ಹೊಂದಿರುವ ಕಾಂಗ್ರೆಸ್‌ಗೆ ಹೆಚ್ಚಿನ ಬಲ ನೀಡಬೇಕಾಗಿದೆ. ಶಾಸಕಿ ನಯನಾ ಮೋಟಮ್ಮ ಕ್ಷೇತ್ರದ ಅಭಿವೃದ್ಧಿಯಲ್ಲಿ ಮುಂಚೂಣಿಯ ಸಾಧನೆ ಮಾಡಿದ್ದಾರೆ. ಇದೆಲ್ಲವೂ ನನಗೆ ಪ್ರೇರಣೆ ನೀಡಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಪಪಂ ಸದಸ್ಯರಾದ ಕೆ.ವೆಂಕಟೇಶ್, ಎಂ.ಎ.ಹಂಝ, ಎಚ್.ಪಿ.ರಮೇಶ್, ಖುರ್ಷಿದಾ ಭಾನು, ನಾಮನಿರ್ದೇಶಿತ ಸದಸ್ಯರಾದ ಅಜ್ಮಲ್, ಜಯಮ್ಮ, ಮುಖಂಡರಾದ ಬಿ.ಎಸ್.ಜಯರಾಂ, ಎಂ.ಎಂ.ಲಕ್ಷ್ಮಣಗೌಡ, ಸಿ.ಕೆ.ಇಬ್ರಾಹಿಂ, ಎಂ.ಎಸ್.ಅನಂತ್, ಅಕ್ರಮ್ ಹಾಜಿ, ಎ.ಜಿ.ಸುಬ್ರಾಯ ಗೌಡ, ಸಂಪತ್, ರವಿ, ಶಿವಕುಮಾರ್, ಎಂ.ಎನ್.ಅಶ್ವತ್ಥ, ಮರಗುಂದ ಪ್ರಸನ್ನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net