ಹಣಕ್ಕೆ ತನ್ನನ್ನೇ ಮಾರಿಕೊಳ್ಳುವ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್: ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಟೀಕೆ

D.Ramesh
Published on

ಮಂಡ್ಯ: ರಾಜ್ಯಪಾಲರಿಗೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಪಕ್ಷದವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಚಲುವರಾಯಸ್ವಾಮಿ ಅವರ ವಿರುದ್ಧ ಲಂಚದ ಆರೋಪ ಹೊರಿಸಿ ಪತ್ರ ಬರೆದಿರುವುದು ಇನ್ನೂ ತನಿಖೆಯಿಂದ ಗೊತ್ತಾಗಿಲ್ಲ. ಕೃಷಿ ಅಧಿಕಾರಿಗಳು ದೂರು ಕೊಟ್ಟರೆ ಅದಕ್ಕೆ ಜೆಡಿಎಸ್ ಹೊಣೆಯೇ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಪ್ರಶ್ನಿಸಿದರು.

ಸಿಆರ್‌ಎಸ್ ಸಚಿವರಾಗಿರುವುದನ್ನು ಅವರ ಪಕ್ಷದವರೇ ಸಹಿಸುತ್ತಿಲ್ಲ. ಆದ್ದರಿಂದ ಕಾಂಗ್ರೆಸ್ ಏಕೆ ಈ ಕೃತ್ಯ ಮಾಡಿರಬಾರದು. ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಪತ್ರ ಬರೆದವರು ಯಾರು ಎಂದು ಕಂಡುಹಿಡಿದು ಇದಕ್ಕೆ ಒಂದು ತಾರ್ಕಿಕ ಅಂತ್ಯ ಹಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಹಣ ಕೊಟ್ಟರೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರು ತನ್ನನ್ನೇ ಮಾರಿಕೊಳ್ಳುವಂತಹ ವ್ಯಕ್ತಿ. ಒಬ್ಬ ನಾಯಕರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ, ನೀವು ಎಷ್ಟು ಆಸ್ತಿ ಲಪಟಾಯಿಸಿದ್ದೀರಿ ಹಾಗೂ ನಿಮ್ಮ ಹಾಗೂ ಕುಟುಂಬದವರ ಮೇಲೆ ಎಷ್ಟು ಕ್ರಿಮಿನಲ್ ಕೇಸುಗಳಿವೆ ಎಂಬುದು ಜಗಜ್ಜಾಹೀರು ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net