ಮಾತುಗಳಿಂದ ಮರಳು ಮಾಡಲಾಗದು: ಜೆಡಿಎಸ್ ಶಾಸಕ ಆರ್.ಮಂಜುನಾಥ್ ಹೇಳಿಕೆ

Dasarahalli Manjanna
Published on

ಬೆಂಗಳೂರು: ಮಾದರಿ ಕ್ಷೇತ್ರ ನಿರ್ವಣಕ್ಕೆ ಉತ್ತಮ ಕೆಲಸಗಾರ ಬೇಕೇ ಹೊರೆತು, ಮಾತುಗಾರನಲ್ಲ. ಕೆಲಸಗಾರ ತನ್ನ ಕಾರ್ಯದ ಮೂಲಕ ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡುತ್ತಾನೆ. ಆದರೆ, ಮಾತುಗಾರ ಕೇವಲ ಮಾತುಗಳಿಂದಲೇ ಜನರನ್ನು ಮರಳು ಮಾಡುವ ಪ್ರಯತ್ನ ಮಾಡುತ್ತಾನೆ ಎಂದು ಜೆಡಿಎಸ್ ಶಾಸಕ ಆರ್. ಮಂಜುನಾಥ್ ಆರೋಪಿಸಿದ್ದಾರೆ.

ಮತ್ತೊಮ್ಮೆ ಮಂಜಣ್ಣ ಕಾರ್ಯಕ್ರಮ

ದಾಸರಹಳ್ಳಿ ಕ್ಷೇತ್ರದ ಹೆಗ್ಗನಹಳ್ಳಿ ರಾಜಗೋಪಾಲ್ ನಗರ ವಾರ್ಡ್​ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮನೆ ಮನೆಗೆ ಭೇಟಿ, ಮತ್ತೊಮ್ಮೆ ಮಂಜಣ್ಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾತುಗಾರನ ಟೀಕೆಗಳು ಕಾಲ ಕಳೆಯುತ್ತಿದ್ದಂತೆ ಸಾಯುತ್ತವೆ. ಆದರೆ ಕೆಲಸಗಾರನ ಕೆಲಸಗಳು ಮಾತ್ರ ಜೀವಂತವಾಗಿ ಉಳಿಯಲಿವೆ. ನಮಗೆ ಜನರ ಬದುಕು ಮುಖ್ಯ. ಅವರ ಮಕ್ಕಳ ಭವಿಷ್ಯ ಮುಖ್ಯ. ಮುಂದಿನ 5 ವರ್ಷದಲ್ಲಿ ಪ್ರತಿ ಮನೆಗೆ ಉದ್ಯೋಗ ನೀಡುವ ಕೆಲಸ ಮಾಡುತ್ತೇನೆ. ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರಿಂದ ಸ್ಥಳಿಯರಿಗೆ ಹೆಚ್ಚು ಉದ್ಯೋಗ ದೊರೆಯಲಿದೆ ಎಂದು ತಿಳಿಸಿದರು.

ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ

ರೈತ ಕುಟುಂಬದಿಂದ ಬಂದ ನಾನು ಬಡವರ ಕಷ್ಟ ಸುಖಗಳನ್ನು ಹತ್ತಿರದಿಂದ ಕಂಡಿದ್ದೇನೆ. ನನ್ನ ಅವಧಿಯಲ್ಲಿ ಬಡವರಿಗೆ ಅನುಕೂಲವಾಗುವ ಕೆಲಸ ಮಾಡಿದ್ದೇನೆ. ನನ್ನನ್ನು ಈ ಬಾರಿ ಮತದಾರರು ಕೈ ಹಿಡಿದರೆ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೊಳೆಗೇರಿ ಪ್ರದೇಶ ಅಭಿವೃದ್ಧಿಪಡಿಸಿ ಮನೆ, ಆಸ್ಪತ್ರೆ ಕುಡಿಯುವ ನೀರಿನ ಘಟಕ, ಆಸ್ಪತ್ರೆ ಕಲ್ಪಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net