ಗ್ರಾಮೀಣ ಭಾಗದಲ್ಲಿ ಬಸ್ ಸೌಲಭ್ಯ ಕಲ್ಪಿಸಿ

web 1
Published on

ತೀರ್ಥಹಳ್ಳಿ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಸ್ ಸೌಲಭ್ಯವಿಲ್ಲದೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದ್ದು ಕೂಡಲೇ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಜೆಡಿಎಸ್ ತಾಲೂಕು ಘಟಕದ ಪದಾಧಿಕಾರಿಗಳು ಶಿರಸ್ತೇದಾರ್​ಗೆ ಮನವಿ ಸಲ್ಲಿಸಿದರು.

ಕರೊನಾ ಕಡಿಮೆಯಾಗಿದ್ದರಿಂದ ಸರ್ಕಾರದ ಆದೇಶದಂತೆ ಜನವರಿ ಒಂದರಿಂದ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭಗೊಂಡಿವೆ. ಆದರೆ ಗ್ರಾಮೀಣ ಭಾಗದ ಕೆಲವು ಪ್ರದೇಶಗಳಿಂದ ಪಟ್ಟಣಕ್ಕೆ ಬಸ್​ಸೌಕರ್ಯವಿಲ್ಲದೆ ಬಡ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಕರೊನಾ ಲಾಕ್​ಡೌನ್​ಗೂ ಮುನ್ನ ತಾಲೂಕಿನ ಗ್ರಾಮೀಣ ಭಾಗದಲ್ಲಿ 160ಕ್ಕೂ ಅಧಿಕ ಖಾಸಗಿ ಬಸ್​ಗಳು ಸಂಚರಿಸುತ್ತಿದ್ದವು. ಪ್ರಯಾಣಿಕರ ಕೊರತೆ ಹಿನ್ನೆಲೆಯಲ್ಲಿ ಕೇವಲ 40-50 ಬಸ್​ಗಳು ಮಾತ್ರ ಸಂಚರಿಸುತ್ತಿವೆ. ತಾಲೂಕಿನ ಹೆದ್ದೂರು, ಕಟ್ಟೆಹಕ್ಕಲು, ಮೃಗವಧೆ, ಸಿಂಗನಬಿದಿರೆ, ಬಸವಾನಿ, ಹಾರೋಗುಳಿಗೆ ಹೀಗೇ ಬಹುತೇಕ ಹಳ್ಳಿಗಳಿಗೆ ಬಸ್ ಸೌಲಭ್ಯ ವಿರಳವಾಗಿದೆ. ಕೆಲವೆಡೆ ಸೀಮಿತ ಅವಧಿಗೆ ಬಸ್​ಗಳು ಸಂಚರಿಸುತ್ತಿವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸರ್ಕಾರಿ ಬಸ್​ಗಳು ಕೇವಲ ಶಿವಮೊಗ್ಗ ಉಡುಪಿ ಮಾರ್ಗದಲ್ಲಿ ಸಂಚರಿಸುತ್ತಿವೆಯೇ ಹೊರತು ಗ್ರಾಮೀಣ ಭಾಗದ ಜನರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಖಾಸಗಿ ಬಸ್ ಮಾಲೀಕರು ಕೇವಲ ಲಾಭಮ ನಷ್ಟದ ಲೆಕ್ಕ ಹಾಕುತ್ತಿದ್ದಾರೆ. ಪರವಾನಗಿ ಹೊಂದಿರುವ ಎಲ್ಲಾ ಖಾಸಗಿ ಬಸ್​ಗಳು ಎಂದಿನಂತೆ ಸಂಚರಿಸುವಂತೆ ಆದೇಶ ನೀಡಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಭಾಗದ ಸಾರ್ವಜನಿಕರ ಅಗತ್ಯತೆ ಅನುಗುಣವಾಗಿ ಎಲ್ಲ ಮಾರ್ಗಗಳಲ್ಲೂ ಸರ್ಕಾರಿ ಬಸ್​ಗಳನ್ನು ಓಡಿಸಬೇಕು ಎಂದು ಹಾಕುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net