

ಕೆ.ಆರ್.ಪೇಟೆ: ತಾಲೂಕಿನ ಬೂಕನಕೆರೆ ಹೋಬಳಿಯ ಗಂಜಿಗೆರೆ ಮತ್ತು ಬಲ್ಲೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕ ಎಚ್.ಟಿ.ಮಂಜು ಅವರು ಜೆಡಿಎಸ್ ಕಾರ್ಯಕರ್ತರು ಮತ್ತು ಸ್ಪರ್ಧಾಕಾಂಕ್ಷಿಗಳ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕರು, 2028ಕ್ಕೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷವು ಅಧಿಕಾರಕ್ಕೆ ಬರುವುದು ಸೂರ್ಯ-ಚಂದ್ರರಷ್ಟೇ ಸತ್ಯವಾಗಿದೆ. ಹಾಗಾಗಿ ಕಾರ್ಯಕರ್ತರು ಧೃತಿಗೆಡಬೇಡಿ. ಈಗ ನಮ್ಮ ಮಂದಿರುವ ಸೊಸೈಟಿಗಳ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಕಾರ್ಯಕರ್ತರ ರಕ್ಷಣೆಗೆ ನಾನು ಸಿದ್ಧನಿದ್ದೇನೆ. ವಿಧಾನಸಭೆಯಲ್ಲಿ ಕ್ಷೇತ್ರದ ಜನರ ಪರವಾಗಿ ಧ್ವನಿಎತ್ತಿ ಅಭಿವೃದ್ಧಿಗೆ
ಶ್ರಮಿಸುತ್ತಿದ್ದೇನೆ ಎಂದರು.
ಸಹಕಾರ ಸಂಘದ ಚುನಾವಣೆಗಳು ಪಕ್ಷದ ಚಿಹ್ನೆ ಮೇಲೆ ನಡೆಯುವುದಿಲ್ಲ. ಆದ್ದರಿಂದ ಸೂಕ್ತ ಅಭ್ಯರ್ಥಿಗಳನ್ನು ಸ್ಥಳೀಯ ಮುಖಂಡರೇ ಆಯ್ಕೆ ಮಾಡಿ. ವಿರೋಧಿ ಅಭ್ಯರ್ಥಿಗಳು ಎಷ್ಟೇ ಪ್ರಭಾವಿ ಆಗಿದ್ದರೂ ನಮ್ಮ ಪಕ್ಷದ ಕಾರ್ಯಕರ್ತರು ಸೈನಿಕರಂತೆ ಗಟ್ಟಿಯಾಗಿ ನಿಂತಿದ್ದಾರೆ ಎಂದು ಕಾರ್ಯಕರ್ತರಿಗೆ ಮನೋಸ್ಥೈರ್ಯ ತುಂಬಿದರು.
ಸಭೆಯಲ್ಲಿ ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಬಿ.ಎಂ.ರಾಮಚಂದ್ರನ್, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕೆ.ಬಿ.ನಾಗೇಶ್, ಜಿಪಂ ಮಾಜಿ ಉಪಾಧ್ಯಕ್ಷ ಗಾಯಿತ್ರಿರೇವಣ್ಣ, ಬೂಕನಕೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ನಂದೀಶ್, ಗ್ರಾಪಂ ಮಾಜಿ ಅಧ್ಯಕ್ಷ ಚಟ್ಟೇನಹಳ್ಳಿ ನಾಗರಾಜು, ಸದಸ್ಯರಾದ ಯೋಗೇಂದ್ರ, ಜಗದೀಶ್, ರೇವಣ್ಣ, ಶ್ರೀಧರ್, ದಿಲೀಪ್, ತಿಮ್ಮೇಗೌಡ, ಡಿ.ಪಿ.ಕುಮಾರ್, ಸುನಿಲ್, ಸಣ್ಣೇಗೌಡ, ಪ್ರಸನ್ನಕುಮಾರ್,
ಬಿ.ಟಿ.ಪ್ರಕಾಶ್, ಬಲ್ಲೇನಹಳ್ಳಿ ರಾಮಕೃಷ್ಣೇಗೌಡ, ಸುಧಾಕರ್, ಯೋಗೇಶ್, ಮತ್ತೀಕೆರೆ ಬೋರೇಗೌಡ, ರವಿ, ತಾಪಂ ಮಾಜಿ ಸದಸ್ಯ ಸೋಮಶೇಖರ್, ಗ್ರಾಪಂ ಅಧ್ಯಕ್ಷ ಪರಮೇಶ್, ರಾಮಕೃಷ್ಣೇಗೌಡ, ಗಂಗಾಧರ್, ಸೋಮಪ್ಪ, ಪರಮೇಶ್, ವಿಜಯ್‌ಕುಮಾರ್, ಮಂಗಳಮ್ಮ ರಾಜೇಗೌಡ, ಲೋಕೇಶ್, ಆನಂದ್, ಬೋರಲಿಂಗೇಗೌಡ, ಪ್ರತಾಪ್, ಮುದಗೆರೆ ದೇವೇಗೌಡ, ರಾಮಣ್ಣ, ಶಿವರಾಜು, ದೊರೆ, ಕೃಷ್ಣೇಗೌಡ, ಮಾವಿನಕೆರೆ ಮಂಜೇಗೌಡ, ಕೆ.ಬಸ್ತಿ ಧನಂಜಯ, ಪ್ರಸನ್ನ, ಯರಗನಹಳ್ಳಿ ಯೋಗೇಶ್ ಇದ್ದರು.