

ಮಡಿಕೇರಿ: ವಿರಾಜಪೇಟೆ ತಾಲೂಕು ಜೆಡಿಎಸ್ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ ಮಾಡಿ, ವಿರಾಜಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ ಪಿ.ಎ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ.
ವಿರಾಜಪೇಟೆ ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷರಾಗಿ ಎಸ್.ಸಿ.ಭವ್ಯಶ್ರೀ, ತಾಲೂಕು ರೈತ ಘಟಕದ ಅಧ್ಯಕ್ಷರಾಗಿ ಬಾಳೆಕುಟ್ಟಿರ ದಿನಿ ಬೋಪಯ್ಯ, ಮಾಹಿತಿ ತಂತ್ರಜ್ಞಾನ ಘಟಕದ ಅಧ್ಯಕ್ಷರಾಗಿ ಕುಲ್ಲಚಂಡ ಕಾರ್ಯಪ್ಪ, ಹಿಂದುಳಿದ ವರ್ಗದ ಅಧ್ಯಕ್ಷರಾಗಿ, ಓ.ಬಿ.ಹರೀಶ್, ಮಾನವ ಹಕ್ಕು ಸಂರಕ್ಷಣಾ ಕಾರ್ಮಿಕರ ಕುಂದು ಕೊರತೆ ಘಟಕದ ಅಧ್ಯಕ್ಷರಾಗಿ ಕೆ.ಎಸ್.ರಜಾಕ್, ವಾಣಿಜ್ಯ ಮತ್ತು ಕೈಗಾರಿಕಾ ಘಟಕದ ಅಧ್ಯಕ್ಷರಾಗಿ ವೈ.ಯು.ಸಂಶೀರ್, ಪದವೀಧರ ಘಟಕದ ಅಧ್ಯಕ್ಷರಾಗಿ ಟಿ.ಎಸ್.ಮಧು, ಕ್ರೀಡಾ ಘಟಕದ ಅಧ್ಯಕ್ಷರಾಗಿ ಟಿ.ಆರ್.ವಿವೇಕ್ ನೇಮಕವಾಗಿದ್ದಾರೆ.
ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಟಿ.ಬಿ.ಉಮೇಶ್, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾಗಿ ಎಚ್.ಎಸ್.ರಾಜೇಶ್, ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷರಾಗಿ ವೈ.ಆರ್.ಸುರೇಶ್, ತಾಲೂಕು ಎಸ್.ಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಭೈರ ಬೇಬಿ, ವಿಕಲಚೇತನ ಘಟಕದ ಅಧ್ಯಕ್ಷರಾಗಿ ಪಿ.ಎಂ.ಖಾಸಿಂ, ಸೇವಾದಳದ ಅಧ್ಯಕ್ಷರಾಗಿ ಕಾಣತ್ತಂಡ ಸಿ.ಬೋಪಣ್ಣ, ಸಾಂಸ್ಕೃತಿಕ ಘಟಕದ ಅಧ್ಯಕ್ಷರಾಗಿ ಸುನಿಲ್ ಮಂಡಲ್, ಕ್ರೈಸ್ತ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಸಿ.ಎ.ಕ್ರಿಸ್ಟಿ, ಬುಡಕಟ್ಟು ಅಲೆಮಾರಿ ಆದಿವಾಸಿ ಘಟಕದ ಅಧ್ಯಕ್ಷರಾಗಿ ಪಿ.ಕೆ.ಸಿದ್ದ, ಕೃಷಿ ಸಾಕಾಣಿಕೆ ಘಟಕದ ಅಧ್ಯಕ್ಷರಾಗಿ ಪಿ.ಕೆ.ಸುರೇಶ್, ಕಾನೂನು ಘಟಕದ ಅಧ್ಯಕ್ಷೆಯಾಗಿ ಡಿ.ಆರ್.ಜಾನ್ಸಿ(ವಕೀಲರು), ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಪಿ.ಜೆ.ಸಜಿತ್ ಆಯ್ಕೆಯಾಗಿದ್ದಾರೆ.
ತಾಂತ್ರಿಕ ಘಟಕದ ಅಧ್ಯಕ್ಷರಾಗಿ ಚಿಲ್ಲವಂಡ ಗಣಪತಿಯವರನ್ನು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಗಣೇಶ್‌ರವರ ಸೂಚನೆ ಮೇರೆಗೆ ಎಲ್ಲ ಜಿಲ್ಲಾ ಘಟಕದ ಅಧ್ಯಕ್ಷರುಗಳ ಅನುಮತಿ ಮೇರೆಗೆ ವಿರಾಜಪೇಟೆ ತಾಲೂಕು ಅಧ್ಯಕ್ಷ ಪಿ.ಎ.ಮಂಜುನಾಥ್‌ರವರು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ವಿರಾಜಪೇಟೆಯಲ್ಲಿ ಕಾರ್ಯಕರ್ತರ ಹಾಗೂ ಮುಖಂಡರ ಹಾಗೂ ಎಲ್ಲಾ ಘಟಕದ ಅಧ್ಯಕ್ಷರುಗಳ ಪದಗ್ರಹಣ ನೆರವೇರಲಿದ್ದು, ಕಾರ್ಯಕ್ರಮಕ್ಕೆ ಕೊಡಗು ಜೆಡಿಎಸ್ ಉಸ್ತುವಾರಿಯಾದ ನರಸಿಂಹಮೂರ್ತಿ, ವಿದ್ಯಾರ್ಥಿ ದಳದ ರಾಜ್ಯಾಧ್ಯಕ್ಷ ಉಮೇಶ್‌ಗೌಡ, ರಾಜ್ಯ ವಕ್ತಾರ ಹಾಗೂ ಕಾರ್ಯದರ್ಶಿಯಾದ ಮೇರಿಯಂಡ ಸಂಕೇತ್ ಪೂವಯ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್ ಖಾನ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪುಷ್ಪಾವತಿ ರಮೇಶ್, ಜಿಲ್ಲಾಧ್ಯಕ್ಷರಾದ ಕೆ.ಎಂ.ಗಣೇಶ್, ಯುವ ಘಟಕದ ಅಧ್ಯಕ್ಷ ಸಿ.ಎಲ್.ವಿಶ್ವ ಹಾಗೂ ನಗರ ಘಟಕದ ಹೋಬಳಿ ಮಟ್ಟದ ಜಿಲ್ಲಾ ಘಟಕದ ಎಲ್ಲಾ ಅಧ್ಯಕ್ಷರುಗಳು ರಾಜ್ಯಮಟ್ಟದ ಮುಖಂಡರು ಆಗಮಿಸಲಿದ್ದಾರೆ ಎಂದು ತಾಲೂಕು ಅಧ್ಯಕ್ಷ ಪಿ.ಎ.ಮಂಜುನಾಥ್ ತಿಳಿಸಿದ್ದಾರೆ.