ನರೇಂದ್ರಮೋದಿ, ಎಚ್‌ಡಿಕೆ ಪ್ರಮಾಣ ವಚನ: ನಗರದಲ್ಲಿ ಜೆಡಿಎಸ್, ಬಿಜೆಪಿ ಸಂಭ್ರಮ

JDS and BJP celebrations Mandya
Published on

ಮಂಡ್ಯ: ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಹಾಗೂ ಕೇಂದ್ರ ಸಚಿವರಾಗಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆ ನಗರದ ಕಲ್ಲಹಳ್ಳಿಯ ಮಾರಮ್ಮ ದೇವಾಲಯದ ಆವರಣದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಅನ್ನಸಂತರ್ಪಣೆ ಮಾಡಿ ಸಂಭ್ರಮಿಸಿದರು.

ಜೆಡಿಎಸ್ ಯುವ ಮುಖಂಡ ಬಿ.ಆರ್.ಸುರೇಶ್ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಅವರು ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2.82 ಲಕ್ಷ ಮತಗಳ ಲೀಡ್ ಕೊಟ್ಟಿದ್ದಾರೆಂದರೆ ಕ್ಷೇತ್ರ ಜನರಿಗೆ ಎಚ್‌ಡಿಕೆ ಮೇಲೆ ಅಭಿಮಾನ ಎಷ್ಟಿದೆ ಎನ್ನುವುದು ತಿಳಿಯುತ್ತದೆ ಎಂದರು.

ಮುಖಂಡರಾದ ಹೇಮಂತ್‌ಗೌಡ, ಅವಿನಾಶ್, ಹರ್ಷ ಅಂಚೆದೊಡ್ಡಿ, ರಮೇಶ್, ಮಂಜುನಾಥ್, ರಾಜು, ವೆಂಕಟೇಶ್, ಚಂದ್ರಶೇಖರ್, ಸಾಗರ್, ಶಿವರತ್ನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net