

ಪಾವಗಡ : ದೇವೇಗೌಡರನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಜಾತ್ಯತೀತ ಜನಾತದಳ ಕುಟುಂಬಕ್ಕೆ ಸೀಮಿತವಾಗಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಗ್ರಾಪಂ, ತಾಪಂ, ಜಿಪಂ, ಮಹಾನಗರ ಪಾಲಿಕೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸಿದ್ದು ನಾನೇ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.
ಪಟ್ಟಣದ ಎಸ್‌ಎಸ್‌ಕೆ ಬಯಲು ರಂಗಮಂದಿರದಲ್ಲಿ ಗುರುವಾರ ತಾಲೂಕು ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಸನ್ಮಾನ ಸವಾರಂಭ ಉದ್ಘಾಟಿಸಿ ವಾತನಾಡಿದರು.
ಜೆಡಿಎಸ್ ಎಂದೆಂದಿಗೂ ರೈತರು, ಶೋಷಿತರು ಹಾಗೂ ಬಡವರ ಪರವಿರುತ್ತದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಕುವಾರಸ್ವಾಮಿ ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದರು.
2023ಕ್ಕೆ ನಿಮ್ಮೆಲ್ಲರ ಸಹಕಾರ ಹಾಗೂ ಕಠಿಣ ಪರಿಶ್ರಮದಿಂದ ಬಹುಮತದೊಂದಿಗೆ ಕುವಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ, ರೈತರ ಸಂಪೂರ್ಣ ಸಾಲಮನ್ನಾ ವಾಡಲಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ರೈತರ ಸಾಲಮನ್ನಾ ವಾಡಲು ಕಾಂಗ್ರೆಸ್ ಒಪ್ಪಲಿಲ್ಲ. ಆದರೂ ಕುವಾರಸ್ವಾಮಿ 1 ಲಕ್ಷ ರೂಪಾಯಿವರೆಗಿನ ಸಾಲಮನ್ನಾ ವಾಡಿದರು. ಇದರಿಂದ ರೈತರಿಗೆ ಬಡ್ಡಿದಾರರ
ಕಿರುಕುಳ ತಪ್ಪಿತು ಎಂದರು.
ಶಾಸಕ ಪುಟ್ಟರಾಜು ವಾತನಾಡಿ, ಅಂದು ಈ ದೇಶಕ್ಕೆ ಗೌಡರು ಕೊಟ್ಟ ಕೊಡುಗೆಯನ್ನ ಇಂದಿನ ಪ್ರಧಾನಿ ಶ್ಲಾಸಿ ಮುಂದುವರಿಸುವಂತಾಗಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ತಾಲೂಕಿನ 17 ಸಾವಿರ ರೈತರ 80 ಕೋಟಿ ರೂಪಾಯಿ ಸಾಲಮನ್ನಾ ಆಗಿದೆ ಎಂದರು.
ಜೆಡಿಎಸ್ ಜಿಲ್ಲಾ ಅಧ್ಯಕ್ಷ ಆರ್.ಸಿ.ಅಂಜಿನಪ್ಪ ವಾತನಾಡಿ, ಜಿಲ್ಲೆಯಲ್ಲಿ 2 ಸಾವಿರ ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯರು ಗೆಲುವು ಸಾಧಿಸಿದ್ದಾರೆ ಎಂದು ಹೇಳಿದರು. ವಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ವಾತನಾಡಿದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ತಿವ್ಮಾರೆಡ್ಡಿ, ಜಿಲ್ಲಾ ಉಸ್ತುವಾರಿ ಬೆಳ್ಳಿ ಲೋಕೇಶ್, ತಾಲೂಕು ಅಧ್ಯಕ್ಷರಾದ ಬಲರಾಮರೆಡ್ಡಿ, ಪ್ರಧಾನ ಕಾರ್ಯದರ್ಶಿ ಗೋವಿಂದ ಬಾಬು, ಕಾರ್ಯಧ್ಯಕ್ಷ ಎನ್.ಎ.ಈರಣ್ಣ, ವಾನಂ ವೆಂಕಟಸ್ವಾಮಿ, ಮಹಿಳಾ ಟಕದ ಅಧ್ಯಕ್ಷರಾದ ಅಂಭಿಕಾರಮೇಶ್, ಪುರಸಭಾ
ಸದಸ್ಯರಾದ ಗೊರ್ತಿ ನಾಗರಾಜು, ಮುಖಂಡರಾದ ಮನುಮಹೇಶ್, ವಸಂತಕುವಾರ್, ಜಿ.ಎ.ವೆಂಕಟೇಶ್ ಹಾಗೂ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸದಸ್ಯರು ಪಕ್ಷದ
ಕಾರ್ಯಕರ್ತರು ಉಪಸ್ಥಿತರಿದ್ದರು.
200 ಮತಗಳ ಅಂತರದಲ್ಲಿ ಸೋತಿದ್ದು ದುರಂತ: ಕ್ಷೇತ್ರದಲ್ಲಿ ವಾಜಿ ಶಾಸಕ ತಿಮ್ಮರಾಯಪ್ಪ ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ 200 ಮತಗಳ ಅಂತರದಲ್ಲಿ ಸೋತಿದ್ದು ದುರಂತ. ಆದರೆ ತಾಲೂಕಿನ 17 ಗ್ರಾಪಂಗಳಲ್ಲಿ ಜೆಡಿಎಸ್ ಜಯಗಳಿಸಿದ್ದು, ಈ ಮೂಲಕ ಅವರು ಪಕ್ಷದ ವರ್ಚಸ್ಸು ಹೆಚ್ಚಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿದರೆ ತಿಮ್ಮರಾಯಪ್ಪ ಸಚಿವರಾಗಿ ಬರಲಿದ್ದಾರೆ ಎಂದು ದೇವೇಗೌಡ ಹೇಳಿದರು.
ತಿಮ್ಮರಾಯಪ್ಪ ಸೋತರೂ ಅವರ ನೇತೃತ್ವದಲ್ಲಿ ತಾಲೂಕು ಜೆಡಿಎಸ್ ಸದೃಢವಾಗಿದೆ. ಜೆಡಿಎಸ್ ಅಧಿಕಾರಕ್ಕೆ ಬಂದ ತಕ್ಷಣ ಆರ್ಯ ವೈಶ್ಯ ಅಭಿವೃದ್ಧಿ ನಿಗಮ ಸ್ಥಾಪಿಸಿ ಬಡವರ ಕಲ್ಯಾಣಕ್ಕೆ ಶ್ರಮಿಸಲಾಗುವುದು. ಶರವಣ ವಾಜಿ ಎಂಎಲ್‌ಸಿ