

ತುರುವೇಕೆರೆ : ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 8 ಕೆರೆಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೈಗೊಳ್ಳಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ದಂಡಿನಶಿವರ ಹೋಬಳಿ ಅಮ್ಮಸಂದ್ರ, ಸಾರಿಗೆಹಳ್ಳಿ, ಕೊಂಡಜ್ಜಿ ಕೆರೆಗಳಿಗೆ ಶಾಶ್ವತ ತೂಬು ಅಳವಡಿಸಿ ಹೇಮಾವತಿ ನೀರು ಹರಿಯಲು ಕಾರಣರಾದ ಸಚಿವ ಮಾಧುಸ್ವಾಮಿ ಹಾಗೂ ಶಾಸಕ ಮಸಾಲ ಜಯರಾಮ್ ಅವರಿಗೆ ಭಾನುವಾರ ಕೆರೆ ಅಚ್ಚುಕಟ್ಟುದಾದರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಬಹು ಗ್ರಾಮ ಕುಡಿಯುವ ನೀರು ಯೋಜನೆಗೆ ಸಿ.ಎಸ್.ಪುರ ಕೆರೆ ಸೇರಿಸಲಾಗಿದ್ದು, ಶಾಸಕರು ಇಚ್ಚೆಪಟ್ಟರೆ ಸಾರಿಗೆಹಳ್ಳಿ ಕೆರೆಯನ್ನೂ ಸೇರಿಸಲಾಗುವುದು. ಅಕ್ಕಪಕ್ಕದ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪ್ರತಿ ಮನೆಗೂ ಸಿಗಲಿದೆ. ಸಾರಿಗೆಹಳ್ಳಿ ಕೆರೆಗೆ ನೀರು ತುಂಬಿಸಲು ರೈತರು ಕಷ್ಟ ಪಡಬೇಕಿತ್ತು. ಈಗ ಶ್ರಮ ಕಡಿಮೆಯಾಗಿದೆ. ಇದನ್ನೇ ಬಹಳ ದೊಡ್ಡ ಕೆಲಸ ಎಂದು ಭಾವಿಸುವುದಿಲ್ಲ. ರೈತರು ನೀರು ವ್ಯರ್ಥವಾಗಲು ಬಿಡದೆ ಕೃಷಿ ಚಟುವಟಿಕೆಗಳಿಗೆ ಸದುಪಯೋಗ ಪಡಿಸಿಕೊಳ್ಳಬೇಕು. ನಂಜುಂಡಪ್ಪ ವರದಿಯಲ್ಲಿ ತುರುವೇಕೆರೆ ಅತೀ ಹಿಂದುಳಿದ ತಾಲೂಕು ಎಂದು ಪಟ್ಟಿಯಲ್ಲಿತ್ತು. ಈಗ ನೀರಾವರಿಯಿಂದ ಸಮೃದ್ಧಿಯಾಗಿದೆ ಎಂದರು.
ಶಾಸಕರು ತಾಲೂಕು ಅಭಿವೃದ್ಧಿಗೆ ಅನುದಾನದ ಹಣದ ಹೊಳೆಯನ್ನೇ ಹರಿಸಿದ್ದಾರೆ. ಸಚಿವರಾದವರೂ ಅನುದಾನ ಇಷ್ಟು ತರಲಾಗಿಲ್ಲ. ಸದ್ಯದಲ್ಲಿಯೇ ಬಾಣಸಂದ್ರ ಏತ ನೀರಾವರಿ ಮಂಜೂರು ಮಾಡಿಸಲಾಗುವುದು ಎಂದರು. ಶಾಸಕ ಮಸಾಲಜಯರಾಮ್ ಮಾತನಾಡಿ, ಸಚಿವ ಮಾಧುಸ್ವಾಮಿ ಅವರ ಸಹಕಾರದಿಂದ ತುರುವೇಕೆರೆ ಕ್ಷೇತ್ರ ಅಭಿವೃದ್ಧಿ ಕಂಡಿದೆ. ಸಾರಿಗೆಹಳ್ಳಿ ಕೆರೆಗೆ ಶ್ವಾಶ್ವತ ತೂಬು ಅಳವಡಿಸಲು ಕಾನೂನು ತೊಡಕು ನಿವಾರಿಸಿ ಖುದ್ದು ಸ್ಥಳ ಪರಿಶೀಲಿಸಿ ಅಧಿಕಾರಿಗಳನ್ನು ಕರೆಸಿ ತೂಬು ಇಡಿಸಲಾಗಿದೆ. ರೈತರ ಪರವಾಗಿ ಧನ್ಯವಾದ ತಿಳಿಸುವುದಾಗಿ ಹೇಳಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಬಿಜೆಪಿ ಸರ್ಕಾರ 2 ವರ್ಷ ಯಶ್ವಸ್ವಿಯಾಗಿ ಪೂರೈಸಿ ಮುಂದಿನ 5 ವರ್ಷ ಬಿಜೆಪಿ ಸರ್ಕಾರ ಬರಲಿದೆ. ಹೊನ್ನೆನಹಳ್ಳಿ ಬಳಿ ಹಾದು ಹೋಗಿರುವ ಎತ್ತಿನ ಹೊಳೆ ನೀರಾವರಿ ಯೋಜನೆಯ ನಾಲೆಯಲ್ಲಿ ತೂಬು ಇಟ್ಟು ತಾಲೂಕಿಗೂ ನೀರು ಲಭ್ಯವಾಗುವಂತೆ ಮಾಡಬೇಕು. ಮಸಾಲ ಜಯರಾಮ್, ಶಾಸಕ