

ತುಮಕೂರು : ಸಹಕಾರ ಸಂಘಗಳಿಗೆ ದೊಡ್ಡ ಶಕ್ತಿಯಿದೆ, ಸಹಕಾರ ಸಂಘಗಳು ಗಟ್ಟಿಯಾಗಲು ಉಳ್ಳವರು ಹೆಚ್ಚು ಠೇವಣಿ ಇಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ನಗರದ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಭಾನುವಾರ ಶ್ರೀಅಗ್ನಿಬನ್ನಿರಾಯಸ್ವಾಮಿ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ, ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು.
ಲಾಭ, ನಷ್ಟ ಲೆಕ್ಕಾಚಾರವಿಲ್ಲದೇ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಾಯ ಮಾಡಿದಾಗ ಸಂಘ ಸ್ಥಾಪನೆ ಮಾಡಿದ್ದಕ್ಕೂ ಸಾರ್ಥಕ, ಇಲ್ಲದವರ ನೆರವಿಗೆ ನಿಲ್ಲಬೇಕಿರುವುದು ಇಂದಿನ ಅನಿವಾರ್ಯತೆ ಕೂಡ. ನಮ್ಮಲ್ಲಿರುವ ಶಕ್ತಿ ಬಳಸಿಕೊಂಡಾಗ ಶಕ್ತಿವಂತರಾಗುತ್ತೇವೆ ಎನ್ನುವುದನ್ನು ತಿಗಳ ಸಮುದಾಯ ಅರಿಯಬೇಕಿದೆ ಎಂದರು.
ಉಳ್ಳವರು ಬೇರೆಯವರ ಸಹಾಯಕ್ಕೆ ಬಂದಾಗ ಯಾವ ಸಮುದಾಯ ಕೂಡ ಅಶಕ್ತರಾಗಿ ಉಳಿಯುವುದಿಲ್ಲ, ಬಡವರಾಗುವುದಿಲ್ಲ, ಅಂಬೇಡ್ಕರ್ ಆಶಯದಂತೆ ಸ್ವಾಭಿಮಾನದಿಂದ ಬದುಕಲು ಶಿಕ್ಷಣ ಅವಶ್ಯಕವಾಗಿದೆ, ಪ್ರತಿಯೊಬ್ಬರೂ ಜವಾಬ್ದಾರಿ ಅರಿತು ನಡೆದರೆ ಸಮಾಜ ಅಭಿವೃದ್ಧಿ ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ತಿಗಳ ಸಮುದಾಯದ ಕಟ್ಟೆಮನೆ ನ್ಯಾಯಪದ್ಧತಿ ಮೇಲೆ ಇಂದಿಗೂ ಜನರಿಗೆ ನಂಬಿಕೆ ಇದೆ, ಕಟ್ಟೆಮನೆ ನ್ಯಾಯವನ್ನು ಮತ್ತೇಲ್ಲೂ ಪ್ರಶ್ನಿಸಿದ ನ್ಯಾಯವನ್ನು ಒಪ್ಪಿ ಅಪ್ಪುವ ಶಿಸ್ತು ಸಮಾಜದಲ್ಲಿದೆ. ವ್ಯವಸಾಯದ ಹೊರತಾಗಿ ಸಮುದಾಯ ಆರ್ಥಿಕವಾಗಿ ಸದೃಢವಾಗಬೇಕು ಎಂದರು.
ತಿಗಳ ಸಮುದಾಯ ಎಷ್ಟೇ ಆರ್ಥಿಕವಾಗಿ ಸದೃಢರಾಗಿದ್ದರು, ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನಹರಿಸಬೇಕು, ಶೈಕ್ಷಣಿಕವಾಗಿ ಈ ಸಮುದಾಯ ಹೆಚ್ಚು ಹೆಚ್ಚು ಮುಂದುವರೆಯಬೇಕು, ಎಲ್ಲ ಸಮುದಾಯಗಳು ಶೈಕ್ಷಣಿಕ ಸಂಸ್ಥೆ ಮಾಡಿಕೊಂಡಿವೆ, ತಿಗಳ ಸಮುದಾಯ ಸಹ ಶೈಕ್ಷಣಿಕ ಸಂಸ್ಥೆ ತೆರೆಯುವ ಮೂಲಕ ಶಿಕ್ಷಣದಲ್ಲಿ ಹಿಂದುಳಿದಿವರಿಗೆ ಉಚಿತ ಶಿಕ್ಷಣ ನೀಡುವಂತಹ ಕೆಲಸಕ್ಕೆ ಮುಂದಾಗಬೇಕು ಎಂದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಟಿ.ಎಲ್.ಕುಂಭಯ್ಯ, ಉಪಾಧ್ಯಕ್ಷ ಪ್ರೆಸ್ ರಾಜಣ್ಣ, ಸಹಕಾರ ಸಂಘದ ನಿರ್ದೇಶಕ ಟಿ.ಎನ್.ಶಿವಣ್ಣ, ಟಿ.ಶ್ರೀನಿವಾಸ್, ಟಿ.ಎಚ್.ವಾಸುದೇವ್, ಟಿ.ಎನ್.ನಾರಾಯಣಸ್ವಾಮಿ, ಬಸವರಾಜು, ಟಿ.ಸಿ.ಶನಿವಾರಯ್ಯ, ಟಿ.ಎಸ್.ಮಂಜುನಾಥ್, ಪ್ರಕಾಶ್, ರಂಗಸ್ವಾಮಿ ಮತ್ತಿತರರು ಇದ್ದರು.
ಸಹಕಾರಿ ಕ್ಷೇತ್ರದಲ್ಲಿ 25 ವರ್ಷಗಳ ಮುಂಚೂಣಿಯಲ್ಲಿ ಇರುವ ಅಗ್ನಿಬನ್ನಿರಾಯ ಸಂಸ್ಥೆ ಸಂಕಷ್ಟದ ಸಮಯದಲ್ಲಿ ಲಾಭಗಳಿರುವುದು ಮಾದರಿ, ಸಹಕಾರಿ ರಂಗದಲ್ಲಿ ಸದಸ್ಯರ ನಂಬಿಕೆಯೇ ಮುಖ್ಯ ಅಂತಹ ನಂಬಿಕೆ ಮುಂದುವರೆಸಿಕೊಂಡು ಹೋಗಬೇಕು,ಠೇವಣಿಯಲ್ಲಿ ಹೆಚ್ಚು ಕಡಿಮೆಯಾಗದಂತೆ ನೋಡಿಕೊಂಡಾಗ ಲಾಭ ಗಳಿಸಲು ಸಾಧ್ಯ. ಎನ್.ಎಸ್.ಜಯಕುಮಾರ್ ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಮಾಜದ ಏಳ್ಗೆಗೆ ಶ್ರಮಿಸುತ್ತಿರುವ ಅಗ್ನಿಬನ್ನಿರಾಯ ಪತ್ತಿನ ಸಹಕಾರ ಸಂಘಕ್ಕೆ ಸಮುದಾಯದ ಎಲ್ಲರ ಕಾಣಿಕೆಯೇ ಕಾರಣ, ವ್ಯವಸಾಯದ ಹಿನ್ನೆಲೆಯ ಸಮಾಜವು ಕೋಟ್ಯಂತರ ರೂಪಾಯಿ ಠೇವಣಿ ಇಟ್ಟಿರುವುದು ನಿಜಕ್ಕೂ ಶ್ಲಾಘನೀಯ, ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಡಾ.ರಫೀಕ್ ಅಹ್ಮದ್ ಮಾಜಿ ಶಾಸಕ