

ತುಮಕೂರು : ಗ್ರಾಮೀಣ ಪ್ರದೇಶಗಳಲ್ಲಿಯೂ ಕರೊನಾ ನಿಯಂತ್ರಣಕ್ಕೆ ವೈದ್ಯಕೀಯ ಸೌಲಭ್ಯ ದೊರೆಯುಂತಾಗಲು ಬೆಂಗಳೂರು ರೋಟರಿ ನೇತೃತ್ವದಲ್ಲಿ ವಿವಿಧ ಸಂಸ್ಥೆಗಳು ಕೊಡುಗೆ ನೀಡಿರುವ 1.75ಕೋಟಿ ರೂ. ಮೌಲ್ಯದ ಮೊಬೈಲ್ ಕ್ಲಿನಿಕ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ವಾಧುಸ್ವಾಮಿ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಬೆಂಗಳೂರು ಹೈಗ್ರೌಂಡ್ಸ್ ರೋಟರಿ, ಸಾಯಿಕಾರ್ಪ ಸಂಸ್ಥೆ, ಅಖಿಐ್ಖಉ ಅಗಿಔಉ ಹಾಗೂ ಟಾಟಾ ಮೆಡಿಕಲ್ ಆ್ಯಂಡ್ ಡಯಾಗ್ನಾಸ್ಟಿಕ್ ಸಂಸ್ಥೆವತಿಯಿಂದ ಸಿಆರ್‌ಐಎಸ್‌ಪಿಆರ್ ತಂತ್ರಜ್ಞಾನ ಬಳಸಿಕೊಂಡು ಸೃಷ್ಟಿಸಿರುವ ಮೊಬೈಲ್ ಕ್ಲಿನಿಕ್ ದೇಶದಲ್ಲಿಯೇ ಮಾದರಿ ಎನಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಎರಡನೇ ಅಲೆ ಕರೊನಾ ವೈರಾಣು ನಿಯಂತ್ರಣ ಮತ್ತು 3ನೇ ಅಲೆಗೆ ಮುನ್ನಚ್ಚರಿಕಾ ಕ್ರಮವಾಗಿ ‘ವೈದ್ಯರ ನಡೆ ಹಳ್ಳಿಗಳ ಕಡೆ’ಅಭಿಯಾನದ ಯಶಸ್ಸಿಗೆ ಈ ಕ್ಲಿನಿಕ್ ಪೂರಕವಾಗಿದ್ದು ಆರಂಭದಲ್ಲಿ ಮಧುಗಿರಿ ಹಾಗೂ ಪಾವಗಡ ತಾಲೂಕಿನಲ್ಲಿ ಸಂಚರಿಸಿ ಸೇವೆ ನೀಡಲಿದೆ.
ಒಂದೇ ಸೂರಿನಡಿ ಆರೋಗ್ಯ ಸಿಬ್ಬಂದಿ ಮತ್ತು ವೈದ್ಯರು ಗ್ರಾಮೀಣ ಪ್ರದೇಶಗಳಿಗೆ ತೆರಳಿ ವೈದ್ಯಕೀಯ ನೆರವನ್ನು ಸಕಾಲದಲ್ಲಿ ನೀಡಲು ಸಹಾಯವಾಗುತ್ತದೆ. ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಎಲ್ಲ ಸವಲತ್ತು ಇರುವ ಮೊಬೈಲ್ ಕ್ಲಿನಿಕ್ ತುಮಕೂರಿನಲ್ಲಿ ಉದ್ಘಾಟನೆಯಾಗಿರುವುದು ವಿಶೇಷವಾಗಿದೆ.
ಸುದ್ದಿಗಾರರ ಜತೆ ಮಾತನಾಡಿದ ಜೆ.ಸಿ.ಮಾಧುಸ್ವಾಮಿ, ಸಂಚಾರಿ ಕ್ಲಿನಿಕ್ ವಾಹನದಿಂದ ಗ್ರಾಮೀಣ ಪ್ರದೇಶಗಳಲ್ಲಿ ಕರೊನಾ ಪರೀಕ್ಷೆ ನಡೆಸಲು ಸಹಕಾರಿಯಾಗಲಿದೆ, ಪಾವಗಡ, ಮಧುಗಿರಿ ತಾಲೂಕಿನಲ್ಲಿ ಸ್ವ್ಯಾಬ್ ಸಂಗ್ರಹ ಮತ್ತು ಕೋವಿಡ್ ಪರೀಕ್ಷೆಗಳು ವಿಳಂಬವಾಗುತ್ತಿದ್ದು ಮೊಬೈಲ್ ಲ್ಯಾಬ್ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದರು.
ಸಂಚಾರಿ ಕ್ಲಿನಿಕ್ ರೂವಾರಿ ರೋಟೇರಿಯನ್ ಬೋಪ್ಪಣ್ಣ ಜತೆ ಚರ್ಚಿಸಿ ಮೈಸೂರು ಹಾಗೂ ತುಮಕೂರು ಜಿಲ್ಲೆಗೆ ಲ್ಯಾಬ್ ಕ್ಲಿನಿಕ್ ನೀಡಬೇಕೆಂದು ಕೋರಿದ್ದೆವು. ಕಳೆದ ಜನವರಿಯಲ್ಲಿಯೇ ಈ ವಾಹನ ಸಿದ್ಧವಾಗಿತ್ತು. ಇದರಲ್ಲಿ ಟಾಟಾ ಎಂಡಿ ಎನ್ನುವ ಅತ್ಯಾಧುನಿಕ ತಂತ್ರಜ್ಞಾನದ ಉಪಕರಣ ಅಳವಡಿಸಲಾಗಿದ್ದು, ಕರೊನಾ ಹಾಗೂ ಇತರ ರೀತಿಯ ವೈರಸ್‌ನ ಪರೀಕ್ಷೆ ವಾಡಲು ಸಹಕಾರಿಯಾಗಲಿದೆ. ಜಿಲ್ಲೆಯ ಪ್ರತಿ ಹಳ್ಳಿಗೂ ಹೋಗಿ ಸ್ವ್ಯಾಬ್ ತೆಗೆದು ಪರೀಕ್ಷೆ ಫಲಿತಾಂಶ ತಿಳಿಸಲು ಅನುಕೂಲವಾಗಿದೆ, ಇಂತಹ ಬೃಹತ್ ಪ್ರವಾಣದ ಸಹಾಯ ವಾಡಿದ ಎಲ್ಲ ಕಂಪನಿಯ ಸದಸ್ಯರು ಮತ್ತು ಸಹಕರಿಸಿದ ಎಲ್ಲರಿಗೂ ಅಭಾರಿಯಾಗಿದ್ದೇನೆ ಎಂದರು. ಕೊರಟಗೆರೆ ತಾಲೂಕು ಆಸ್ಪತ್ರೆಯಲ್ಲಿ ವಿಪ್ರೋ ಸಂಸ್ಥೆ 30 ಲಕ್ಷ ರೂ.,ವೆಚ್ಚದಲ್ಲಿ 150 ಕಿಲೀ., ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಟಕವನ್ನು ಸ್ಥಾಪಿಸಲಿದ್ದು, ವಿಪ್ರೋ ಸಂಸ್ಥೆಯ ಹಿರಿಯ ಜನರಲ್ ವ್ಯಾನೇಜರ್ ಚಂದ್ರಶೇಖರನ್‌ಗೂ ಜಿಲ್ಲಾಡಳಿತ ಆಭಾರಿಯಾಗಿದೆ ಎಂದರು.
ಟಾಟಾ ಕಂಪನಿ ಸಿಇಒ ಗಿರೀಶಕೃಷ್ಣಮೂರ್ತಿ ಮಾತನಾಡಿ, ಜನರಿಗೆ ಅನುಕೂಲವಾಗುವ ಸೇವೆ ವಾಡಲು ಅವಕಾಶ ಕೊಟ್ಟ ಸರ್ಕಾರಕ್ಕೆ ಧನ್ಯವಾದಗಳು. ನಾವು ಇದನ್ನು ಸೇವೆ ವಾಡಲೆಂದೇ ಅಭಿವೃದ್ಧಿಪಡಿಸಿದ್ದೇವೆ. ಇಂತಹದ್ದೇ ಪ್ರಯೋಗಾಲಯದಿಂದ ಕುಂಭಮೇಳದಲ್ಲಿ 50 ಸಾವಿರ ಪರೀಕ್ಷೆ ವಾಡಲಾಗಿದೆ ಎಂದರು. ದೇಶದ್ಯಾಂತ ಸುವಾರು ಮೊಬೈಲ್ ಕ್ಲಿನಿಕ್ ಪ್ರಯೋಗಾಲಯ ನೀಡಲು ನಿರ್ಧರಿಸಿದ್ದೇವೆ, ಮೊದಲ ಆದ್ಯತೆಯಾಗಿ ಕರ್ನಾಟಕ ರಾಜ್ಯಕ್ಕೆ ನೀಡಲಾಗಿದೆ. ಜಿಲ್ಲೆಗೆ ಸಿಟಿ ಸ್ಕ್ಯಾನ್‌ಬೇಕೆಂದು ಕೇಳಲಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆ ವತಿಯಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕರಾದ ಬಿ.ಸಿ.ನಾಗೇಶ್, ಮಸಾಲ ಜಯರಾಂ, ಜಿ.ಬಿ.ಜ್ಯೋತಿಗಣೇಶ್, ಡಾ.ರಾಜೇಶ್‌ಗೌಡ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಕೆ.ವಿದ್ಯಾಕುಮಾರಿ, ಡಾ.ಕೆ.ವಂಶಿಕೃಷ್ಣ, ಸಯ್‌ಕೊರ್ಪ್ ಹೆಲ್ತ್ ಟೆಕ್ನಾಲೊಜಿಸಿಸ್ ನಿರ್ದೇಶಕ ಡಾ.ಬೋಪಣ್ಣ, ರೋಟರಿ ತುಮಕೂರು ಸೆಂಟ್ರಲ್‌ನ ಬಿಳಿಗೆರೆ ಶಿವಕುಮಾರ್, ಚಿತ್ರನಿರ್ದೇಶಕ ಬಿ.ಎಸ್.ಲಿಂಗದೇವರು ಮತ್ತಿತರರು ಇದ್ದರು.