ಶೃಂಗೇರಿಯಲ್ಲಿ ಜೆಸಿಐ ಸಪ್ತಾಹ ವಿಶೇಷ ಕಾರ್ಯಕ್ರಮ

jccc
ಶೃಂಗೇರಿಯಲ್ಲಿ ಜೆಸಿಐ ಸಪ್ತಾಹದ ಆಮಂತ್ರಣ ಪತ್ರಿಕೆಯನ್ನು ಅಧ್ಯಕ್ಷ ಕೆ.ಎ.ಸುಜನ್ ಬಿಡುಗಡೆಗೊಳಿಸಿದರು. ಕಾರ್ಯದರ್ಶಿ ಶ್ರೀಕಾಂತ್, ರಮೇಶ್ ಶೂನ್ಯ, ಕೆ.ಎನ್.ಪೂರ್ಣಚಂದ್ರ ಇದ್ದರು.
Published on

ಶೃಂಗೇರಿ: ಜೆಸಿಐನಿಂದ ಸೆ.9ರಿಂದ 15ರ ತನಕ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮುದಾಯ ಹಾಗೂ ವ್ಯಕ್ತಿತ್ವ ವಿಕಸನಕ್ಕಾಗಿ ಹಲವು ಸ್ಪರ್ಧೆಗಳು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಕೆ.ಎ.ಸುಜನ್ ತಿಳಿಸಿದರು.

ಜೆಸಿಐ ಸಪ್ತಾಹದ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ಬಿಡುಗಡೆಗೊಳಿಸಿ ಮಾತನಾಡಿ, ಸೆ.9ರಂದು ಬೆಳಗ್ಗೆ 11 ಗಂಟೆಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಉದ್ಘಾಟನೆ ನೆರವೇರಲಿದೆ. ಆಡಳಿತ ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ತಾಲೂಕು ಆರೋಗ್ಯ ಅಧಿಕಾರಿ ಡಾ.ದಯಾನಂದ್ ಮತ್ತು ಪೂರ್ವಾಧ್ಯಕ್ಷ ಎಚ್.ಸಿ.ರಾಮಚಂದ್ರರಾವ್ ಭಾಗವಹಿಸಲಿದ್ದಾರೆ. ಆರೋಗ್ಯ ತಪಸಾಣೆ, ರಕ್ತದಾನ, ನೇತ್ರದಾನ ಹಾಗೂ ಸಾಮಾಜಿಕ ಸೇವಾಕರ್ತರಿಗೆ ಗೌರವ ಸಮರ್ಪಣೆ ಜರುಗಲಿದೆ. 10ರ ಬೆಳಗ್ಗೆ 9.30ಕ್ಕೆ ಜೆಸಿಬಿಎಂ ಕಾಲೇಜಿನ ಕ್ರೀಡಾಂಗಣದಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
11ರ ಬೆಳಗ್ಗೆ 10.30ಕ್ಕೆ ಮೆಣಸೆ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ತಂಬಾಕು ಉತ್ಪನ್ನಗಳ ಬಳಕೆಯಿಂದ ಎದುರಾಗುವ ಸಮಸ್ಯೆಗಳು ಕುರಿತು ಜಾಗೃತಿ ಉಪನ್ಯಾಸ ಏರ್ಪಡಿಸಲಾಗಿದೆ. ವಿವಿ ನಿರ್ದೇಶಕ ಎಸ್.ಎನ್.ಮೂರ್ತಿ ನೆರವೇರಿಸಲಿದ್ದು, ಅತಿಥಿಗಳಾಗಿ ಪಿಎಸ್‌ಐ ಬರಮಪ್ಪ ಬೆಳಗಲಿ, ಜೇಸಿ ವಿಶ್ವೇಶ್ವರ್ ಭಾಗವಹಿಸುವರು. ಜೆಸಿಐ ತರಬೇತುದಾರ ಎನ್.ಕೆ.ವಿಜಯಕುಮಾರ್ ಉಪನ್ಯಾಸ ನೀಡಲಿದ್ದಾರೆ. 12ರ ಬೆಳಗ್ಗೆ 10 ಗಂಟೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ, ಪರಿಸರದ ಕುರಿತು ಶಾಲಾ, ಕಾಲೇಜು ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
13ರಿಂದ 15ರ ತನಕ ಪ್ರತಿದಿನ ಸಂಜೆ 5.30ಕ್ಕೆ ವಿವಿಧ ಕಾರ್ಯಕ್ರಮಗಳು ಪಟ್ಟಣದ ಡಾ. ವಿ.ಆರ್.ಗೌರೀಶಂಕರ್ ಸಭಾಂಗಣದಲ್ಲಿ ನಡೆಯಲಿವೆ. 13ರಂದು ಶಿಶುವಿಹಾರ, ಪ್ರಾಥಮಿಕ ಶಾಲಾ ಮಕ್ಕಳಿಗೆ ಛದ್ಮವೇಷ, ಭೂಪಟದಲ್ಲಿ ರಾಜ್ಯವನ್ನು ಗುರುತಿಸುವುದು, ಸ್ಥಳದಲ್ಲಿ ಚಿತ್ರ ಬಿಡಿಸುವುದು, ಸಾರ್ವಜನಿಕರಿಗೆ ತೋಲ್ ಮೋಲ್ ಕೆ ಬೋಲ್, ಇಡ್ಲಿ ತಿನ್ನುವ ಸ್ಪರ್ಧೆ, ಏಕ್ ಮಿನಿಟ್ ಕಾರ್ಯಕ್ರಮ ಜರುಗಲಿದೆ. ಮುಖ್ಯಅತಿಥಿಗಳಾಗಿ ಬೆಟಗರೆ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೊಡ್ತಲ್ ರಮೇಶ್ ಭಟ್, ಜೇಸಿ ಎ.ಜಿ.ಪ್ರಶಾಂತ್, ಉದ್ಯಮಿ ಎಂ.ಎಸ್.ಹರೀಶ್ ಭಟ್ ಭಾಗವಹಿಸಲಿದ್ದಾರೆ. 14ರಂದು ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಗಿದ್ದು ಜಾನಪದ ನೃತ್ಯ, ಸಿನಿಮಾ ನೃತ್ಯ, ಜಾನಪದ ಸಮೂಹ ಗೀತೆ, ಕಾಮಿಡಿ ಏಕವ್ಯಕ್ತಿ ಪ್ರದರ್ಶನ, ಫ್ಯಾಷನ್ ಶೋ ನಡೆಯಲಿದೆ. ಶಿಶುವಿಹಾರ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ. ಮುಖ್ಯಅತಿಥಿಗಳಾಗಿ ಉದ್ಯಮಿ ಕೆ.ಎಸ್.ರಮೇಶ್, ಎಚ್.ಎ.ನವೀನ, ಜೇಸಿ ಟಿ.ಬಿ.ನಾಗೇಶ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
15ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಕೆ.ಎ.ಸುಜನ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಟಿ.ಡಿ.ರಾಜೇಗೌಡ, ವಲಯ-14ರ ಉಪಾಧ್ಯಕ್ಷ ಚರಣ್‌ರಾಜ್, ಆಡಳಿತ ಮತ್ತು ನಿರ್ವಹಣೆ ನಿರ್ದೇಶಕ ಜೆಎಫ್‌ಪಿ ಪ್ರಸಾದ್ ಆಚಾರ್ಯ, ಸಲಹೆಗಾರ ಶೇಖರ್ ಬೆಳ್ಳುಳ್ಳಿ ಭಾಗವಹಿಸಲಿದ್ದಾರೆ. ಶುದ್ಧ ನೀರಿನ ಘಟಕ ಹಾಗೂ ಬಹುಮಾನ ವಿತರಣೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸರಿಗಮಪ ಸೀಸನ್ 19ರ ವಿಜೇತೆ ಪ್ರಗತಿ ಬಡಿಗೇರ್ ಅವರಿಂದ ಆರ್ಕೆಸ್ಟಾ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net