16ರಿಂದ 21ರವರೆಗೆ ಭರವಸೆಯ ಜೇಸಿಐ ಸಪ್ತಾಹ-2023

Published on

ಸೋಮವಾರಪೇಟೆ: ಪುಷ್ಪಗಿರಿ ಜೇಸಿಐ ಸಂಸ್ಥೆ ವತಿಯಿಂದ ನ.16 ರಿಂದ 21ರವರೆಗೆ ಭರವಸೆಯ ಜೇಸಿಐ ಸಪ್ತಾಹ-2023 ಕಾರ್ಯಕ್ರಮ ನಂಜಮ್ಮ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಎಂ.ಎ. ರುಬೀನಾ ತಿಳಿಸಿದರು.

16ರಂದು ಸಂಜೆ 6.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. 7.30ಕ್ಕೆ ಯುಕೆಜಿ, 1ರಿಂದ 5ನೇ ತರಗತಿ ಹಾಗೂ 6 ರಿಂದ 10ನೇ ತರಗತಿಯವರೆಗೆ ಮೂರು ವಿಭಾಗಗಳಲ್ಲಿ ಛದ್ಮವೇಷ ಸ್ಪರ್ಧೆ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

17ರಂದು ಬೆಳಿಗ್ಗೆ 10.30ಕ್ಕೆ 4 ರಿಂದ 7, 8 ರಿಂದ 10 ಹಾಗೂ ಕಾಲೇಜು ಮತ್ತು ಸಾರ್ವಜನಿಕರ ವಿಭಾಗದಲ್ಲಿ ಚದುರಂಗ ಸ್ಪರ್ಧೆ ನಡೆಯಲಿದೆ. ಇದರಲ್ಲಿ ವಿಜೇತರಿಗೆ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು. ಸಂಜೆ 6.30 ರಿಂದ ಜೇಸಿ ಮನೋಹರ್ ಮತ್ತು ತಂಡದವರಿಂದ ಲಹರಿ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ ಎಂದರು.

18ರಂದು ಬೆಳಗ್ಗೆ 10.30ಕ್ಕೆ 4 ರಿಂದ 7, 8 ರಿಂದ 10 ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ 11.30ಕ್ಕೆ ಬರವಣಿಗೆ ಸ್ಪರ್ಧೆ ನಡೆಯಲಿದೆ. 12ಕ್ಕೆ 7 ರಿಂದ 10 ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಮಕ್ಕಳ ಕವಿಗೋಷ್ಠಿ ಸ್ಪರ್ಧೆ ನಡೆಯಲಿದೆ. ಸಂಜೆ 6 ಕ್ಕೆ 5ರಿಂದ 10 ಹಾಗೂ ಕಾಲೇಜು ಮತ್ತು ಸಾರ್ವಜನಿಕರಿಗೆ ಸೋಲೋ ನೃತ್ಯ ಸ್ಪರ್ಧೆ ನಡೆಯಲಿದೆ. ಪ್ರತಿ ವಿಭಾಗದಲ್ಲಿ ಮೊದಲು ನೋಂದಾಯಿಸಿದ 10 ತಂಡಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.

19 ನೇ ಭಾನುವಾರ ಬೆಳಗ್ಗೆ ಜೇಸಿ ವೇದಿಕೆಯಿಂದ ಮಕ್ಕಳು ಬಾಲಕ ಮತ್ತು ಬಾಲಕೀಯರ ವಿಭಾಗದಲ್ಲಿ ಮ್ಯಾರಥಾನ್ ಸ್ಪರ್ಧೆ ನಡೆಯಲಿದ್ದು, ಉದ್ಯಮಿ ಹರಪಳ್ಳಿ ರವೀಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. 10.30ಕ್ಕೆ ಸ್ಥಳೀಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ 4ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ನಿಧಾನವಾಗಿ ಸೈಕಲ್ ಚಲಿಸುವ ಸ್ಪರ್ಧೆ ನಡೆಯಲಿದೆ. ಪುರುಷರಿಗೆ ನಿಧಾನವಾಗಿ ಮೋಟಾರ್ ಸೈಕಲ್ ಚಲಿಸುವ ಸ್ಪರ್ಧೆ, ಸಾರ್ವಜನಿಕರಿಗೆ 4 ಚಕ್ರ ವಾಹನ ಹಿಂದೆ ಚಲಿಸುವ ಸ್ಪರ್ಧೆ ನಡೆಯಲಿದೆ. ಸಂಜೆ 6 ಕ್ಕೆ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಕಾಲೇಜು ಮತ್ತು ಸಾರ್ವಜನಿಕರ ವಿಭಾಗದಲ್ಲಿ ಗ್ರೂಪ್ ಡಾನ್ಸ್ ಸ್ಪರ್ಧೆ ನಡೆಯಲಿದೆ.

20ರಂದು ಬೆಳಗ್ಗೆ 10.30ಕ್ಕೆ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದಲ್ಲಿ ಜಾನಪದ ನೃತ್ಯ ಸ್ಪರ್ಧೆ ನಡೆಯಲಿದೆ. ಸಂಜೆ 6.30ಕ್ಕೆ ಕರೋಕೆ ಗಾಯನ ಸ್ಪರ್ಧೆ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಕಾಲೇಜು ಮತ್ತು ಸಾರ್ವಜನಿಕರಿಗೆ ನಡೆಯಲಿದೆ. 21ರಂದು ಬೆಳಗ್ಗೆ 10.30ಕ್ಕೆ ನಾರಿಗೊಂದು ಸವಾಲು ಕಾರ್ಯಕ್ರಮ ಅಂಗನವಾಡಿ ಶಿಕ್ಷಕರು ಹಾಗೂ ಸಾರ್ವಜನಿಕ ಮಹಿಳೆಯರಿಗೆ ನಡೆಯಲಿದೆ. ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಇರಲಿದೆ. ಹೆಚ್ಚಿನ ಮಾಹಿತಿಗಾಗಿ 7337770613, 9972832956 ಸಂಪರ್ಕಿಸಲು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಜಗದಾಂಬ ಗುರುಪ್ರಸಾದ್, ವಿನುತಾ ಸುದೀಪ್, ಕೆ.ಎ. ಪ್ರಕಾಶ್, ಪವಿತ್ರಾ ಲಕ್ಷ್ಮೀಕುಮಾರ್, ನೆಲ್ಸನ್ ಡಿಸೋಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net