

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಕ್ಕಿದಾಗ ಮತ್ತು ಯುವ ಮನಸ್ಸಿನಲ್ಲಿ ವ್ಯಕ್ತಿತ್ವ ಬೆಳೆದಾಗ ದೇಶದ ಸಂಪತ್ತು ಬೆಳೆದಂತೆ. ಜೆಸಿಐ ಸಂಸ್ಥೆಯು ವ್ಯಕ್ತಿತ್ವವನ್ನು ಬೆಳೆಸುವ ಮೂಲಕ ದೇಶದ ಸಂಪತ್ತನ್ನು ಬೆಳೆಸುತ್ತದೆ ಎಂದು ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು. ಬೆಳ್ತಂಗಡಿಯಲ್ಲಿ ನಡೆದ ಮಂಜುಶ್ರೀ ಜೆಸಿಐ ಬೆಳ್ತಂಗಡಿ ಇದರ ಜೇಸಿ ಸಪ್ತಾಹ 2024 ಸುಧಾಮ ಸ್ನೇಹ- ಸಾಧನೆ- ಸಮ್ನಿಲನ ಕಾರ್ಯಕ್ರಮದ ಸಮಾರೋಪದಲ್ಲಿ ಜೆಸಿಐ ವತಿಯಿಂದ ಅತ್ಯುತ್ತಮ ಯುವ ಸಾಧಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಉಜಿರೆ ಲಕ್ಷ್ಮೀ ಗ್ರೂಪ್‌ನ ಮಾಲೀಕ ಉಜಿರೆ ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಮಾತನಾಡಿ, ಯುವ ಸಮಾಜವನ್ನು ಆದರ್ಶವಾಗಿ ಬೆಳೆಸುವ ಸಂಸ್ಥೆ ಜೆಸಿಐ ಸಂಸ್ಥೆ .ಇಂತಹ ಸಂಸ್ಥೆಯ ಜೊತೆ ಇರುವುದೇ ಭಾಗ್ಯವಾಗಿದೆ ಎಂದರು. ಜೆಸಿಐ ವಲಯಾದ್ಯಕ್ಷ ಗಿರೀಶ್ ಎಸ್.ಪಿ.ಮಾತನಾಡಿ, ಬೆಳ್ತಂಗಡಿ ಜೆಸಿಐ ಘಟಕ ಈ ವಷರ್ ಅತ್ಯುತ್ತಮ ಸಾಧನೆ ಮಾಡಿ ದಾಖಲೆಯಾಗಿ ಪ್ರಶಸ್ತಿ ಪಡೆದಿದೆ. ರಂಚಿತ್ ಅವರ ಶ್ರಮ ಇಡೀ ಜೆಸಿಐ ಘಟಕಗಳಿಗೆ ಮಾದರಿ ಎಂದರು. ಬೆಳ್ತಂಗಡಿ ಜೆಸಿಐ ಅಧ್ಯಕ್ಷ ರಂಜಿತ್ ಎಚ್.ಡಿ.ಅಧ್ಯಕ್ಷತೆ ವಹಿಸಿ ಮಾತನಾಡಿ, ಒಗ್ಗೂಡಿಸುವ ಮನೋಭಾವ, ಸಾಧಿಸುವ ಛಲ, ತಾಳ್ಮೆ ಇದ್ದರೆ ಗೆಲುವು ಸಾಧ್ಯ ಎಂಬುದನ್ನು ಬೆಳ್ತಂಗಡಿ ಜೆಸಿಐ ಘಟಕ ತೋರಿಸಿದೆ ಎಂದರು. ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಸೇವಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಪ್ತಾಹ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮ ಪ್ರಾಯೋಜಕರಿಗೆ, ಶ್ರಮಿಸಿದ ಜೆಸಿಐನ ಎಲ್ಲರನ್ನು, ಮುಳಿಯ ಸಮೂಹ ಸಂಸ್ಥೆಗಳನ್ಬು ಗೌರವಿಸಲಾಯಿತು. ಉಜಿರೆ ಎಸ್‌ಡಿಎಂ ಸೊಸೈಟಿ ಕಾರ್ಯದರ್ಶಿ ಡಾ.ಸತೀಶ್ಚಂದ್ರ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಜೆಸಿಐ ಪೂರ್ವ ವಲಯಾಧ್ಯಕ್ಷ ಸಂಪತ್ ಸುವರ್ಣ, ನಿಕಟ ಪೂರ್ವಾಧ್ಯಕ್ಷ ಶಂಕರ್ ರಾವ್, ಕಾರ್ಯದರ್ಶಿ ಅನುದೀಪ್ ಜೈನ್, ಸಪ್ತಾಹ ಸಂಯೋಜಕಿ ಹೇಮಾವತಿ ಕೆ., ಜೇಸಿ ಸಂಯೋಜಕಿ ಶ್ರುತಿ ರಂಜಿತ್, ಕೋಶಾಧಿಕಾರಿ ಮಮಿತ ಸುಧೀರ್, ಜೂನಿಯರ್ ಜೇಸಿ ಅಧ್ಯಕ್ಷ ಸಮನ್ವಿತ್ ಕುಮಾರ್, ಸಪ್ತಾಹ ಸಂಯೋಜಕ ರಕ್ಷಿತ್ ಅಂಡಿಂಜೆ, ಮಾಜಿ ಅಧ್ಯಕ್ಷ ಕಿರಣ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರ್ದೇಶಕ ಸಂತೋಷ್ ಪಿ.ಕೋಟ್ಯಾನ್ ನಿರೂಪಿಸಿದರು. ರಂಜಿತ್ ಎಚ್.ಡಿ.ಸ್ವಾಗತಿಸಿದರು. ಅಮೃತಾ ಎಸ್. ಕೋಟ್ಯಾನ್, ನಿಸಾರ್, ಶಶಿಕಲಾ, ಹೇಮಾವತಿ, ಮದುರಾ, ಸಹಕರಿಸಿದರು.
ನಾಯಕತ್ವ ಗುಣವನ್ನು ಕಲಿಸುವ ಜೆಸಿಐ ಸಾವಿರಾರು ಯುವಕರಿಗೆ ದಾರಿದೀಪವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ವೈದ್ಯರಾಗಬೇಕು, ಉತ್ತಮ ಇಂಜಿನಿಯರ್ ಆಗಬೇಕು ಎಂದು ಕನಸು ಕಂಡು ಎಕ್ಸೆಲ್ ಕಾಲೇಜು ಪ್ರಾರಂಭಿಸಿದೆ. ಇದಕ್ಕೆ ಪ್ರೇರಣೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯುವ ರತ್ನಮಾನಸ, ಸಿದ್ಧವನದ ಶಿಕ್ಷಣ. ಇಲ್ಲಿಯ ಶಿಸ್ತು ಮತ್ತು ಶಿಕ್ಣಣ ಈ ಮಟ್ಟಕ್ಕೆ ಬೆಳೆಸಿದೆ. ಸುಮಂತ್ ಕುಮಾರ್ ಜೈನ್, ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಅಧ್ಯಕ್ಷ https://www.vijayavani.net/women-are-strong-through-self-employment https://www.vijayavani.net/support-of-divine-power-for-religious-work