

ಬಾಳೆಹೊನ್ನೂರು: ಜೇಸಿಐ ಸಂಸ್ಥೆ ಯುವ ಜನರ ವ್ಯಕ್ತಿತ್ವ ವಿಕಸನ ಮೂಡಿಸುತ್ತಿರುವ
ಮುಂಚೂಣಿ ಸಂಸ್ಥೆಯಾಗಿದೆ ಎಂದು ಜೇಸಿಐ ಭಾರತದ ರಾಷ್ಟ್ರಾಧ್ಯಕ್ಷ ಅಂಕುರ್
ಜುಂಜುನ್‌ವಾಲಾ ಹೇಳಿದರು.
ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಕಾರ್ಯ ಚಟುವಟಿಕೆ ವೀಕ್ಷಣೆಗೆ ನಡೆದ ಅಧಿಕೃತ
ಭೇಟಿ ಸಮಾರಂಭದಲ್ಲಿ ಮಾತನಾಡಿ, ಜೇಸಿ ಸಂಸ್ಥೆ ಯುವಜನರಲ್ಲಿ ವ್ಯಕ್ತಿತ್ವ ವಿಕಸನ,
ನಾಯಕತ್ವದ ಗುಣ ಬೆಳೆಸುವ ಕೆಲಸ ಮಾಡುತ್ತಿದೆ. ವಿಶ್ವದ ಅನೇಕ ರಾಜಕೀಯ ನಾಯಕರು,
ಉದ್ಯಮಿಗಳು, ಗಣ್ಯರು, ಜೇಸಿಐ ಸದಸ್ಯರಾಗಿ ಅನೇಕ ತರಬೇತಿ ಪಡೆದು
ಯಶಸ್ವಿಯಾಗುವ ಮೂಲಕ ಸಮಾಜದಲ್ಲಿ ಅಗ್ರಗಣ್ಯ ಸ್ಥಾನ ಪಡೆದುಕೊಂಡಿದ್ದಾರೆ.
ಜೇಸಿಐ ಸಂಸ್ಥೆ ಕೇವಲ ವ್ಯಕ್ತಿತ್ವ ವಿಕಸನವನ್ನು ಮಾತ್ರವಲ್ಲದೇ ಸಮಾಜ ಸೇವೆಯಲ್ಲಿಯೂ
ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸಮಾಜದ ವಿವಿಧ ಸ್ತರಗಳಲ್ಲಿ ತನ್ನದೇ ಆದ ರೀತಿಯಲ್ಲಿ
ಕಾರ್ಯನಿರ್ವಹಣೆ ಮಾಡುತ್ತಿದೆ. ಸಂಸ್ಥೆಯು ವಿಶೇಷ ಶಾಶ್ವತ ಕಾರ್ಯಕ್ರಮಗಳನ್ನು
ಸಮಾಜಕ್ಕೆ ಮಾದರಿಯಾಗಿ ನೀಡುತ್ತಿದೆ. ಯುವಜನರನ್ನು ಹೆಚ್ಚು ಸಂಖ್ಯೆಯಲ್ಲಿ ಜೇಸಿಐಗೆ
ಸೇರಿಸುವುದರೊಂದಿಗೆ ಅವರನ್ನು ಸಮಾಜದ ಮುಂಚೂಣಿಗೆ ತರುವ ಕೆಲಸ ಮಾಡುತ್ತಿದೆ
ಎಂದರು.
ಜೇಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಡಾ.ನವೀನ್ ಲಾಯ್ಡ ಮಿಸ್ಕಿತ್, ವಲಯಾಧ್ಯಕ್ಷ
ವಿಜಯಕುಮಾರ್, ಸ್ಥಳೀಯ ಘಟಕದ ಅಧ್ಯಕ್ಷ ಇಬ್ರಾಹಿಂ ಶಾಫಿ, ಪೂರ್ವ ವಲಯಾಧ್ಯಕ್ಷೆ
ಯಶಸ್ವಿನಿ, ವಲಯ ಕಾರ್ಯದರ್ಶಿ ಸುಪ್ರಿತ್, ವಲಯಾಧಿಕಾರಿ ಎನ್.ಶಶಿಧರ್, ಪ್ರಮುಖರಾದ
ಸೈಯದ್ ಾಜಿಲ್ ಹುಸೇನ್, ಚೈತನ್ಯ ವೆಂಕಿ, ವಿ.ಅಶೋಕ್, ಸಿ.ವಿ.ಸುನೀಲ್, ಪ್ರಕಾಶ್
ಕೂಳೂರು, ರಂಜಿತ್ ಮತ್ತಿತರರು ಹಾಜರಿದ್ದರು.