ಕುಶಾಲನಗರ ಕಾವೇರಿ ಜೆಸಿಐಗೆ ಪ್ರಶಸ್ತಿ

jci
Published on

ಮಡಿಕೇರಿ:

ಉತ್ತಮ ಸೇವಾ ಕಾರ್ಯಗಳು ಹಾಗೂ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ ಕುಶಾಲನಗರ ಜೆಸಿಐ ಕಾವೇರಿ ಘಟಕಕ್ಕೆ ಶೃಂಗೇರಿಯಲ್ಲಿ ಭಾನುವಾರ ನಡೆದ ಜೆಸಿಐ ಇಂಡಿಯಾದ ವಲಯ- 14 ರ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನದ ವಿಸ್ತಾರ ಕಾರ್ಯಕ್ರಮದಲ್ಲಿ 3ನೇ ಸ್ಥಾನ ಲಭಿಸಿದೆ ಎಂದು ಸಂಸ್ಥೆಯ ಅಧ್ಯಕ್ಷೆ ತೇಜ ದಿನೇಶ್ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ದೇವನಹಳ್ಳಿ ಘಟಕ ಪ್ರಥಮ ಮತ್ತು ವಿಜಯಪುರ ಘಟಕ ದ್ವಿತೀಯ ಸ್ಥಾನ ಪಡೆದುಕೊಂಡಿವೆ. ಜೆಸಿಐ ರಾಷ್ಟ್ರೀಯ ಅಧ್ಯಕ್ಷ ಅಂಕುರ್ ಜೂನ್ಜುನ್ ವಾಲಾ ಜೆಸಿಐ ಕುಶಾಲನಗರ ಕಾವೇರಿ ಅಧ್ಯಕ್ಷೆ ತೇಜ ದಿನೇಶ್ ಮತ್ತು ತಂಡದವರಿಗೆ ಟ್ರೋಫಿ ಮತ್ತು ಬಹುಮಾನ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ವಲಯ ಉಪಾಧ್ಯಕ್ಷ ಬಿ. ಜಗದೀಶ್, ವಲಯ ಸಮನ್ವಯಾಧಿಕಾರಿ ಎಂ.ಜೆ. ರಜನಿಕಾಂತ್, ಜೆಸಿಐ ವಲಯ ಅಲ್ಯೂಮಿನಿ ಕ್ಲಬ್

ಮಾಜಿ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ಕಾರ್ಯದರ್ಶಿ ಡಿ. ಪುನೀತ್, ಸದಸ್ಯರಾದ ಕಾವ್ಯ ಜಗದೀಶ್, ಕೋಮಲ ರಜನಿಕಾಂತ್, ಸಿ. ರವಿ, ಶ್ರೀನಿವಾಸ್ ಹಾಗೂ ಸದಸ್ಯರು ಇದ್ದರು.

ಈ ವರ್ಷ ಜೆಸಿಐ ಕುಶಾಲನಗರ ಕಾವೇರಿ ಘಟಕ ಶನಿವಾರಸಂತೆ ಸಿರಿ ಎಂಬ ಹೊಸ ಘಟಕವನ್ನು ಸ್ಥಾಪಿಸಿದ್ದು, ಇದು ಘಟಕದ ಸಾಧನೆಗೆ ಮತ್ತೊಂದು ಮೈಲುಗಲ್ಲಾಗಿದೆ ಎಂದು ಸಂಸ್ಥೆಯ ವಲಯ ಸಮನ್ವಯಾಧಿಕಾರಿ ರಜನೀಕಾಂತ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net