ಅಕ್ರಮ ಮಣ್ಣು ಸಾಗಿಸುತ್ತಿದ್ದ ಜೆಸಿಬಿ, ಟ್ರ್ಯಾಕ್ಟರ್ ವಶಕ್ಕೆ

JCB Tractor
ರಾಣೆಬೆನ್ನೂರ ತಾಲೂಕಿನ ಕೋಡಿಯಾಲ ಹೊಸಪೇಟೆಯಲ್ಲಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ಜೆಸಿಬಿ ಮತ್ತು ಟ್ರ್ಯಾಕ್ಟರನ್ನು ಕುಮಾರಪಟ್ಟಣ ಪೊಲೀಸರು ವಶಕ್ಕೆ ಪಡೆದಿರುವುದು.
Published on

ಮುಂಡಗೋಡ: ತಾಲೂಕಿನ ಅರಶಿಣಗೇರಿ ಮಲಬಾರ್ ಕಾಲನಿ ಬಳಿಯ ಅರಣ್ಯದಲ್ಲಿ ಅಕ್ರಮವಾಗಿ ಜೆಸಿಬಿ ಮೂಲಕ ಮಣ್ಣು ಅಗೆಯುತ್ತಿದ್ದಾಗ ಅರಣ್ಯ ಇಲಾಖೆಯವರು ದಾಳಿ ನಡೆಸಿ ಜೆಸಿಬಿ ಹಾಗೂ ಟ್ರ್ಯಾಕ್ಟರ್ ಅನ್ನು ಶನಿವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.

ಅರಶಿಣಗೇರಿ ಮಲಬಾರ ಕಾಲನಿ ಬಳಿಯ ಅರಣ್ಯದಲ್ಲಿರುವ ಹಾರನಕೇರಿ ಹತ್ತಿರ ಅಕ್ರಮವಾಗಿ ರಾತ್ರಿ ಜೆಸಿಬಿಯಿಂದ ಮಣ್ಣು ತೆಗೆದು ಟ್ರ್ಯಾಕ್ಟರ್ ಮೂಲಕ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಡಿಎಫ್​ಒ ಹರ್ಷಾಬಾನು, ಎಸಿಎಫ್ ರವಿ ಹುಲಕೋಟಿ, ಆರ್​ಎಫ್​ಒ ವಾಗೀಶ ಬಿ.ಜೆ. ಮಾರ್ಗದರ್ಶನದಲ್ಲಿ ಇಂದೂರ ಉಪವಲಯ ಅರಣ್ಯಾಧಿಕಾರಿ ಶ್ರೀಕಾಂತ ವೆರ್ಣೆಕರ, ಅರಣ್ಯ ಪಾಲಕ ನಾರಾಯಣಸಿಂಗ್ ರಜಪೂತ್, ಸಿಬ್ಬಂದಿ ದಾಳಿ ನಡೆಸಿ ಜೆಸಿಬಿ ಹಾಗೂ ಟ್ರ್ಯಾಕ್ಟರ್ ವಶಕ್ಕೆ ಪಡೆಯಲಾಗಿದೆ.

ಇನ್ನುಳಿದ ಟ್ರ್ಯಾಕ್ಟರ್​ಗಳನ್ನು ದಾಳಿ ವೇಳೆ ಪರಾರಿ ಮಾಡಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net