ನಾಲೆಗೆ ಜೆಸಿಬಿ ಪಲ್ಟಿಯಾಗಿ ಕ್ಲೀನರ್ ಸಾವು

IMG-20231215-WA0082
Published on

ಶ್ರೀರಂಗಪಟ್ಟಣ: ತಾಲೂಕಿನ ಗಣಂಗೂರು ಗ್ರಾಮ ಹೊರವಲಯದ ಕಲ್ಲು ಗಣಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ನಾಲಾ ಏರಿ ರಸ್ತೆ ಬಳಿ ಶುಕ್ರವಾರ ಚಾಲಕನ ನಿಯಂತ್ರಣ ತಪಿದ್ಪ ಜೆಸಿಬಿ ವಾಹನ ವಿ.ಸಿ. ಉಪನಾಲೆಗೆ ಉರುಳಿ ಬಿದ್ದು ಕ್ಲೀನರ್ ಮೃತಪಟ್ಟಿದ್ದಾನೆ.

ತಮಿಳುನಾಡಿನ ಪೊಲ್ಲಾಚಿ ಮೂಲದ ಶಬರಿ(30) ಮೃತರು. ಮೈಸೂರಿನ ತ್ಯಾಗರಾಜು ಎಂಬುವವರು ಜೆಸಿಬಿ ವಾಹನದ ಮಾಲೀಕರಾಗಿದ್ದು, ಚಾಲಕ ಬಸವರಾಜು ಗಣಂಗೂರು ಕಲ್ಲುಗಣಿ ಪ್ರದೇಶದಲ್ಲಿನ ಡಾಂಬರು ಘಟಕದಲ್ಲಿ ಕಾರ್ಯನಿರ್ವಹಿಸಿ ತೆರಳುತ್ತಿದ್ದ ವೇಳೆ ನಾಲಾ ಏರಿ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ನಾಲೆಗೆ ಪಲ್ಟಿಯಾಗಿದೆ. ಪರಿಣಾಮ ಚಾಲಕನ ಪಕ್ಕದಲ್ಲೇ ಕುಳಿತಿದ್ದ ಕ್ಲೀನರ್ ಶಬರಿ ಮೃತಪಟ್ಟರು. ಶವವನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಚಾಲಕ ಸ್ಥಳದಿಂದ ನಾಪತ್ತೆಯಾಗಿದ್ದಾನೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಜೆಸಿಬಿಯಿಂದ ನಾಲೆಯಿಂದ ಮೇಲೆತ್ತಿದರು. ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net