ಶೆಡ್ಡಿನಿಂದ ಹೊರಬಾರದ ಜೆಸಿಬಿ - ಶೋ ಪೀಸ್‌ನಂತೆ ನಿಲ್ಲಿಸಲು ಖರೀದಿ ಎಂದು ಆರೋಪ

IMG-20240731-WA0017
Published on

ವಿಟ್ಲ: ಗುಡ್ಡ ಕುಸಿತ, ಎಲ್ಲೆಂದರಲ್ಲಿ ನೀರು ನುಗ್ಗುವುದು ಸೇರಿ ಮಳೆ ಹಾನಿ ನಡೆಯುತ್ತಿದ್ದರೂ, ವಿಟ್ಲ ಪಟ್ಟಣ ಪಂಚಾಯಿತಿಯ ಜೆಸಿಬಿ ಶೆಡ್ಡಿನಿಂದ ಹೊರ ಬರುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ

ವಿಟ್ಲ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ಪಂಚಾಯಿತಿ ಕಾಮಗಾರಿ ಮತ್ತು ತುರ್ತು ಕಾರ್ಯಗಳನ್ನು ನಡೆಸುವ ನಿಟ್ಟಿನಲ್ಲಿ ಹೊಸ ಜೆಸಿಬಿ ಖರೀದಿಸಲಾಗಿತ್ತು. ಖರೀದಿಸಿದ ಕೆಲವು ಸಮಯದಲ್ಲೇ ದುರಸ್ತಿಗೆ ಬಂದಿತ್ತು. ಈಗ ಚುನಾವಣೆಯ ಸಮಯದಲ್ಲಿ ಒಂದು ಲಕ್ಷ ರೂ. ವೆಚ್ಚದಲ್ಲಿ ರಿಪೇರಿ ಮಾಡಲಾಗಿತ್ತು. ಅದಾಗಿ ಕೆಲವೇ ದಿನದಲ್ಲಿ ಮತ್ತೆ ಕೆಟ್ಟು ಹೋಗಿದ್ದು, ಪಟ್ಟಣ ಪಂಚಾಯಿತಿ ಆಡಳಿತಾಽಕಾರಿಯಾಗಿರುವ ಬಂಟ್ವಾಳ ತಹಸೀಲ್ದಾರ್ ದುರಸ್ತಿ ನಡೆಸಲು ಸೂಚನೆ ನೀಡಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಶೆಡ್ಡಿನಲ್ಲಿ ಶೋ ಪೀಸ್ ಆಗಿ ನಿಲ್ಲಿಸುವುದಕ್ಕೆ ಜೆಸಿಬಿ ಖರೀಸಿದಂತಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net