“ಜೇಸಿ ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ”

Teachers Day Photo
Published on

ಜಗತ್ತಿನಲ್ಲಿ ಗುರುವಿನ ಸ್ಥಾನ ಮಾನ ಬಹಳ ಉನ್ನತವಾದದ್ದು ಅದಕ್ಕೆ ಹರ ಮುನಿದರು ಗುರು ಕಾಯುವ ಎನ್ನುವ ಮಾತಿದೆ. ಗುರುವು ತಮಸ್ಸನ್ನು ಕಳೆದು ಬೆಳಕನ್ನು ನೀಡುವ ಮಹಾದಾನಿ ಎಂದೆನಿಸಿರುವುದು. ವ್ಯಕ್ತಿಯ ವ್ಯಕ್ತಿತ್ವವನ್ನು ಉನ್ನತಿಗೇರಿಸಲು ಜೀವನದಲ್ಲಿ ಪ್ರತ್ಯಕ್ಷ ಅಪ್ರತ್ಯಕ್ಷ ಗುರುವರ್ಯರು ಕಾರಣರಾಗಿದ್ದಾರೆ. ಭಾರತ ದೇಶದ ಬಡ ಕುಟುಂಬದಲ್ಲಿ ಜನಿಸಿ ಕ್ರಿಯಾಶಕ್ತಿ ಮತ್ತು ಜ್ಞಾನ ಶಕ್ತಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಒಂದು ಬಹು ದೊಡ್ಡ ಉದಾಹರಣೆಯಾಗಿ ನಿಲ್ಲುತ್ತಾರೆ ನಮ್ಮ ದೇಶದ ಹಿರಿಯ ಶಿಕ್ಷಕ, ಶಿಕ್ಷಣ ತಜ್ಞ, ತತ್ವಜ್ಞಾನಿ ಮತ್ತು ಭಾರತ ಕಂಡ ಮೊದಲ ಉಪರಾಷ್ಟçಪತಿ ಡಾ|ಸರ್ವಪಲ್ಲಿ ರಾಧಾಕೃಷ್ಣನ್ ಇವರಿಗೆ ಶಿಕ್ಷಕರೆಂದರೆ ಅಪಾರ ಪ್ರೀತಿ ಹಾಗಾಗಿ ಇವರು ತಮ್ಮ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಬೇಕು, ಎಂದು ಹೇಳಿದ ಅಗ್ರಗಣ್ಯ ಶಿಕ್ಷಕರು ಎಂದು ಜೇಸಿ ಪ್ರೌಢಶಾಲೆಯಲ್ಲಿ ದಿನಾಂಕ:೫-೯-೨೦೨೩ ರಂದು ನಡೆದ ಶಿಕ್ಷಕರದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಅಧ್ಯಕ್ಷರಾದ ಶ್ರೀ ಆರ್.ಕೆ ಹಬೀಬ ಮಾತನಾಡಿದರು.

ಇವರು ಮುಂದುವರೆದು ಮಾತನಾಡಿ ಶಿಕ್ಷಕರು ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಶಿಲ್ಪಿಗಳು ಎಂದು ಹೇಳುವ ಮೂಲಕ ಶಿಕ್ಷಕರೆಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಷಯಗಳನ್ನು ತಿಳಿಸಿದರು.
ಜೇಸಿ ಪ್ರೌಢಶಾಲೆಯಲ್ಲಿ ಪ್ರತೀ ವರ್ಷವೂ ಕೂಡ ಶಿಕ್ಷಕರ ಗಣನೀಯ ಸೇವೆಯನ್ನು ಗುರುತಿಸಿ ವರ್ಷದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನ ಕೊಡುತ್ತ ಬಂದುದ್ದು ಸ್ಮರಣಾರ್ಹ, ಸನ್೨೦೨೩-೨೪ ನೇ ಸಾಲಿನ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಭರತ ಕರಾಣೆ ಘೋಷಣೆ ಮಾಡುತ್ತ ಸನ್೨೦೨೩-೨೪ ನೇ ಸಾಲಿನ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಶ್ರೀಮತಿ ಜಯಶ್ರೀ ಅರಿಷಿಣಗುಡಿ ಇವರಿಗೆ , ಹಾಗೂ ೨೦೨೩-೨೪ ನೇ ಸಾಲಿನ ಉತ್ತಮ ಕಛೇರಿ ಸಿಬ್ಬಂದಿ ಪ್ರಶಸ್ತಿಯನ್ನು ಶ್ರೀಯುತ ವಿನಾಯಕ ರೆಡ್ಡಿ ಬಸವರೆಡ್ಡೇರ ಇವರಿಗೆ ಕೊಟ್ಟು ಸನ್ಮಾನಿಸಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಶ್ರೀಮತಿ ಜಯಶ್ರೀ ಅರಿಷಿಣಗುಡಿ ಮಾತನಾಡುತ್ತ ಈ ಪ್ರಶಸ್ತಿಗೆ ಶಾಲೆಯ ಹಿರಿಯ ಶಿಕ್ಷಕರ ಮಾರ್ಗದರ್ಶನ ಪ್ರಾಚಾರ್ಯರ ಮತ್ತು ನನ್ನ ಸಹೋದ್ಯೋಗಿಗಳ ಸಹಕಾರವೇ ಮುಖ್ಯ ಕಾರಣ, ಪ್ರಶಸ್ತಿ ನೀಡಿದ ಆಡಳಿತ ಮಂಡಳಿಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಈ ಪ್ರಶಸ್ತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿದರು.
ಶಾಲೆಯ ಹಿರಿಯ ಶಿಕ್ಷಕಿಯರಾದ ಜ್ಯೋತಿ ಹೇರಲಗಿ ಮಾತನಾಡಿ ವೇದ ಉಪನಿಷತ್ತುಗಳ ಕಾಲದಿಂದಲೂ ಗುರುಸ್ಮರಣೆ ಮಾಡುತ್ತ ಬಂದ ದೇಶ ನಮ್ಮದು, ಗುರುವಿಗೆ ತನ್ನದೇ ಆದ ವೈಶಿಷ್ಟ÷್ಯವಿದೆ. ನಾನಾ ವಿಷಯಗಳಲ್ಲಿ ವಿಶ್ವಮಟ್ಟದಲ್ಲಿ ಬೆಳಗಿದ ಶ್ರೇಷ್ಟ ವಿದ್ವಾಂಸರ ಸಾಧನೆಗಳ ಹಿಂದೆ ಗುರುಗಳ ಮಾರ್ಗದರ್ಶನ ಇರುವುದನ್ನು ಸ್ಮರಿಸಬೇಕು ಎಂದು ಮಾತನಾಡಿದರು.
ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ಶಾಹೀನ್ ಶೇಖ ಇವರು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಶಿಕ್ಷಕರು ಸಮಾಜ ನಿರ್ಮಾಣದ ನಿರ್ಮಾತೃಗಳು ವಿದ್ಯೆ ಕಲಿಸಿದ ಶಿಕ್ಷಕರನ್ನು ಸ್ಮರಿಸುವುದು ಬಹಳ ಮುಖ್ಯವಾಗಿದೆ ಎಂದು ಶಿಕ್ಷಕರ ದಿನಾಚರಣೆಯ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಂದ ಸಾಂಸ್ಕöÈತಿಕ ಕಾರ್ಯಕ್ರಮಗಳು ನೆರವೇರಿದವು.
ಕಾರ್ಯಕ್ರಮದ ಪೂರ್ವದಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥನೆಗೈದರು, ಕುಮಾರ ತರುಣ ಪಾಟೀಲ ಸರ್ವರನ್ನು ಸ್ವಾಗತಿಸಿದರು, ಕುಮಾರಿ ಮದೀಹಾ ಹೆಸರೂರ ವಂದಿಸಿದರು, ಕುಮಾರಿ ಸ್ನೇಹಾ ದೊಡ್ಡಮನಿ ಕುಮಾರಿ ಮಾಹೆರಾ ಹೆಸರೂರ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net