

ಚಿಕ್ಕನಾಯಕನಹಳ್ಳಿ : ಕ್ಷೇತ್ರದ ಗೊಲ್ಲ ಸಮುದಾಯದವರಿಗೆ 2 ಸಾವಿರ ಮನೆ ಮಂಜೂರು ಮಾಡಲಾಗುತ್ತಿದ್ದು, ಇದಕ್ಕೆ ವಸತಿ ಸಚಿವ ವಿ. ಸೋಮಣ್ಣ ಸಹಕರಿಸಿದ್ದಾರೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಅಲೆಮಾರಿ, ಅರೆಅಲೆಮಾರಿ ಸಮುದಾಯದ ವಸತಿ ಫಲಾನುಭವಿಗಳಿಗೆ ಕಾರ್ಯಾದೇಶಪತ್ರ ವಿತರಿಸಿ ಮಾತನಾಡಿದರು. ಚಿಕ್ಕನಾಯಕನಹಳ್ಳಿ, ಗುಬ್ಬಿ, ಶಿರಾ ಭಾಗದಲ್ಲಿ ಗೊಲ್ಲ ಸಮುದಾಯ ಹಾಗೂ ಇತರ ಅಲೆಮಾರಿ ಜನಾಂಗದವರು ಹೆಚ್ಚಾಗಿ ನೆಲೆಸಿದ್ದಾರೆ. ಇವರಿಗೆ ಅನುಕೂಲವಾಗಲೆಂದು ಜಿಲ್ಲೆಗೆ 12ರಿಂದ 15 ಸಾವಿರ ಮನೆಗಳನ್ನು ನೀಡಲಾಗಿದೆ. ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ 2 ಸಾವಿರಕಕ್ಕೂ ಹೆಚ್ಚು ಮನೆ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ 945 ಮನೆ ಮಂಜೂರಾಗಿವೆ. ಮುಂದಿನ ಹಂತದಲ್ಲಿ ಉಳಿದ ಮನೆಗಳನ್ನು ನೀಡಲಾಗುವುದು ಎಂದರು.
ಕಾರ್ಯಾದೇಶಪತ್ರ ಪಡೆದವರು ಮಾರ್ಚ್ ಅಂತ್ಯದೊಳಗೆ ಮನೆಕಟ್ಟಲು ಪ್ರಾರಂಭಿಸಿ, ಮೊದಲ ಬಿಲ್ ಪಡೆದುಕೊಳ್ಳಬೇಕು. ಒಂದು ವರ್ಷದೊಳಗೆ ಮನೆ ನಿರ್ಮಾಣ ಆರಂಭಿಸದಿದ್ದರೆ ಹಣ ವಾಪಸ್ ಹೋಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಪಂ ಇಒ ವಸಂತ್‌ಕುಮಾರ್ ಮಾತನಾಡಿ, 2021-22ನೇ ಸಾಲಿಗೆ ವಸತಿ ಲಾನುಭವಿಗಳಿಗೆ ಕಾರ್ಯದೇಶಪತ್ರಗಳನ್ನು ವಿತರಿಸಲಾಗುತ್ತಿದೆ. ತಾಲೂಕಿನ 27 ಗ್ರಾಪಂ ವ್ಯಾಪ್ತಿಯಲ್ಲಿ ಲಾನುಭವಿಗಳನ್ನು ಗುರುತಿಸಲಾಗಿದೆ. ಮೊದಲ ಹಂತವಾಗಿ 945 ಮಂದಿಗೆ ಕಾರ್ಯಾದೇಶಪತ್ರ ನೀಡಲಾಗುತ್ತಿದ್ದು, ಉಳಿದ 1,445 ಜನರಿಗೆ ಮುಂದಿನದಿನಗಳಲ್ಲಿ ನೀಡಲಾಗುವುದು ಎಂದರು. ತಾಪಂ ಆಡಳಿತಾಧಿಕಾರಿ ರಾಜಸುಲೋಚನ, ತಹಸೀಲ್ದಾರ್ ತೇಜಸ್ವಿನಿ, ತಾಪಂ ಮಾಜಿ ಸದಸ್ಯ ಕೇಶವಮೂರ್ತಿ ಇದ್ದರು.
ತಾಪಂನಿಂದ ಲಾನುಭವಿಗಳ ಗುರುತು : ಪಕ್ಷ ಭೇದ ಮರೆತು ಎಲ್ಲ ಅರ್ಹ ಲಾನುಭವಿಗಳನ್ನು ಗುರುತಿಸುವ ಜವಾಬ್ದಾರಿಯನ್ನು ತಾಲೂಕು ಪಂಚಾಯಿತಿಗೆ ವಹಿಸಲಾಗಿದೆ. ಲಾನುಭವಿಗಳ ಪಟ್ಟಿ ಅಂತಿಮಗೊಳಿಸಲು ಸಾಧ್ಯವಾಗದಿದ್ದರೆ, ಬಿಜೆಪಿ ಕಾರ್ಯಕರ್ತರು ಈ ಕಾರ್ಯದಲ್ಲಿ ಸಹಕರಿಸುವರು. ಪಟ್ಟಿಯಲ್ಲಿ ಯಾರಾದರೂ ಹೆಸರು ಬಿಟ್ಟು ಹೋಗಿದ್ದರೆ, ನೇರವಾಗಿ ನನಗೆ ತಿಳಿಸಿದರೆ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವ ಮಾಧುಸ್ವಾಮಿ ಭರವಸೆ ನೀಡಿದರು.
ಅಭಿವೃದ್ಧಿ ಬಗ್ಗೆ ಉಡಾಫೆ ಮಾತನಾಡುವವರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಕ್ಷೇತ್ರದ ಜನತೆಯ ಸೇವೆ ಹಾಗೂ ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ಲಂಬಾಣಿ ತಾಂಡ, ಗೊಲ್ಲರಹಟ್ಟಿಗಳನ್ನು ಕಂದಾಯಗ್ರಾಮಗಳನ್ನಾಗಿ ಮಾಡುವುದರ ಮೂಲಕ ಜಾತಿಹೆಸರಿನಲ್ಲಿ ಕರೆಯುತ್ತಿದ್ದ ಹಟ್ಟಿಗಳನ್ನು ಬದಲಾಯಿಸಲಾಗುವುದು ಹಾಗೂ 100ಪಡಿತರ ಚೀಟಿಗಳಿದ್ದರೆ ಆ ತಾಂಡ, ಹಟ್ಟಿಗಳಿಗೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲಾಗುವುದು. ಮಾಧುಸ್ವಾಮಿ ಸಚಿವ