ಜೆಸಿ ನೂತನ ಪದಾಧಿಕಾರಿಗಳ ಪದಗ್ರಹಣ

JC
Published on

ಕುಶಾಲನಗರ:

ಕುಶಾಲನಗರ ಜೆಸಿ ಇಂಟರ್‌ನ್ಯಾಷನಲ್ ಕಾವೇರಿ ಘಟಕದ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕುಶಾಲನಗರ ಸಮೀಪ ಖಾಸಗಿ ರೆಸಾರ್ಟ್ನಲ್ಲಿ ಬುಧವಾರ ಸಂಜೆ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಘಟಕದ 24ನೇ ಅಧ್ಯಕ್ಷರಾದ ತಂಬAಡ ತೇಜ ದಿನೇಶ್ ಮತ್ತು ತಂಡದ ಸದಸ್ಯರಿಗೆ ಜೆ ಸಿ ವಲಯ ಅಧ್ಯಕ್ಷ ವಿಜಯಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು. ನೂತನ ಸದಸ್ಯರಿಗೆ ವಲಯ ಉಪಾಧ್ಯಕ್ಷ ಬಿ. ಜಗದೀಶ್ ಪ್ರಮಾಣ ವಚನ ಬೋಧಿಸಿದರು.

ಮುಖ್ಯ ಅತಿಥಿಗಳಾಗಿ ಸ್ಥಾಪಕ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಉಪಸ್ಥಿತರಿದ್ದು ಮಾತನಾಡಿದರು. ದಿಕ್ಸೂಚಿ ಭಾಷಣಕಾರರಾಗಿ ಜೆಎಸಿ ನಿಕಟಪೂರ್ವ ಅಧ್ಯಕ್ಷ ಎಂ. ಡಿ. ರಂಗಸ್ವಾಮಿ ಪಾಲ್ಗೊಂಡಿದ್ದರು.

ಹಿಂದಿನ ಸಾಲಿನ ಅಧ್ಯಕ್ಷ ಬಿ. ಜಗದೀಶ್ ತಮ್ಮ ಅವಧಿಯಲ್ಲಿ ನಡೆಸಲಾದ ಕಾರ್ಯಕ್ರಮಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭ ನಿಕಟಪೂರ್ವ ಅಧ್ಯಕ್ಷರುಗಳಾದ ರಜನಿಕಾಂತ್, ರಾಜೇಂದ್ರ, ಪ್ರವೀಣ್, ಪುನೀತ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net