ಜಯೇಂದ್ರಪುರಿ ಶ್ರೀಗಳ ಭವ್ಯ ಮೆರವಣಿಗೆ

5BLH2A
Published on

ಬೈಲಹೊಂಗಲ: ಪಟ್ಟಣದ ಗುರು ಮಡಿವಾಳೇಶ್ವರಮಠದ 43ನೇ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ಬೆಂಗಳೂರು ಕೈಲಾಸ ಆಶ್ರಮ ಮಹಾಸಂಸ್ಥಾನದ ಮಹಾಮಂಡಲೇಶ್ವರ ಆಚಾರ್ಯ ಜಗದ್ಗುರು ಜಯೇಂದ್ರಪುರಿ ಶ್ರೀಗಳ ಮೆರವಣಿಗೆ ಭವ್ಯ ಕುದುರೆ ಬೆಳ್ಳಿ ಸಾರೋಟದಲ್ಲಿ ಅದ್ದೂರಿಯಾಗಿ ನಡೆಯಿತು.

ಗುರು ಮಡಿವಾಳೇಶ್ವರ ಮೂರ್ತಿಯೊಂದಿಗೆ ನಡೆದ ಜಯೇಂದ್ರಪುರಿ ಸ್ವಾಮೀಜಿ ಮೆರವಣಿಗೆಯಲ್ಲಿ ಸುಮಂಗಲೆಯರು ಭಾನುವಾರ ಪೂರ್ಣಕುಂಭ ಹೊತ್ತು ಸಾಗಿದರು. ಪುಷ್ಪವೃಷ್ಟಿ, ಚಂಡೆವಾದನ, ಭಕ್ತರ ಹರ್ಷೋದ್ಗಾರ ಸಂಭ್ರಮ ಹೆಚ್ಚಿಸಿತು. ಕಲ್ಲಗುಡಿ ರಾಮಲಿಂಗೇಶ್ವರ ದೇವಸ್ಥಾನದಿಂದ ಮಡಿವಾಳೇಶ್ವರಮಠದ ಪೀಠಾಧಿಪತಿ ಮಡಿವಾಳೇಶ್ವರ ಸ್ವಾಮೀಜಿ ನೇತತ್ವದಲ್ಲಿ ಆರಂಭವಾದ ಮೆರವಣಿಗೆ ಬಸ್ ನಿಲ್ದಾಣ, ಇಂಚಲ ಕ್ರಾಸ್ ಮಾರ್ಗವಾಗಿ ಶ್ರೀಮಠ ತಲುಪಿತು. ಆಗ ಭಕ್ತರು ನೈವೇದ್ಯ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಗುರು ಮಡಿವಾಳೇಶ್ವರ ಮೂರ್ತಿ, ಸಿಂಹಾಸನ, ಪಲ್ಲಕ್ಕಿ ಉತ್ಸವ ನೋಡುಗರ ಕಣ್ಮನ ಸೆಳೆಯಿತು.

ಉದ್ಯಮಿಗಳಾದ ಹರ್ಷ ಢಮ್ಮಣಗಿ, ದೀಪಕ ಶೆಟ್ಟಿ , ವಿಎಚ್ಪಿ ಜಿಲ್ಲಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ವಿಜಯವಾಣಿ ತಾಲೂಕು ವರದಿಗಾರ ಬಸವರಾಜ ಕಲಾದಗಿ, ಹಿರಿಯರಾದ ಸಣ್ಣಬಸಪ್ಪ ಕುಡಸೋಮಣ್ಣವರ, ಶಿವಪ್ಪ ದೊಡಮನಿ, ಶಿವಾನಂದ ಬೆಳಗಾವಿ, ಮಡ್ಡೆಪ್ಪ ಕುರಿ, ಅಶೋಕ ಸವದತ್ತಿ, ಮಹಾಂತೇಶ ಹಣಸಿ, ಕೀರ ಮಡ್ಡೆನ್ನವರ, ಈರಪ್ಪ ಹಣಸಿ, ವಿಠ್ಠಲ ಬೊಂಗಾಳೆ, ಮಹಾಬಳೇಶ್ವರ ಕಡಕೋಳ, ಶಿವು ಹತ್ತರಕಿ, ಮಲ್ಲಿಕಾರ್ಜುನ ಕಮತಗಿ, ವಕೀಲ ಎಸ್.ವಿ. ಸಿದ್ರಾಮಣಿ, ರವಿ ಲಕ್ಕನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net