ಜೇಸಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್​ ರಚನೆ

07GDG08
Published on

ವಿಜಯವಾಣಿ ಸುದ್ದಿಜಾಲ ಗದಗ
ಒಂದು ವ್ಯವಸ್ಥೆ ಸುಗಮವಾಗಿ ನಡೆಯಲು ಸರ್ಕಾರ ಅಗತ್ಯ. ಇದರ ಅರಿವು ಮತ್ತು ಕರ್ತವ್ಯ ಪ್ರಜ್ಞೆ ಮೂಡಿಸುವ ಸದುದ್ದೇಶದಿಂದ ಶಾಲಾ ಸಂಸತ್ತನ್ನು ರಚನೆ ಮಾಡಲಾಗಿದೆ, ನಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ. ಇಂದು ಆಯ್ಕೆಯಾದ ಶಾಲಾ ಸಂಸತ್ತಿನ ಎಲ್ಲ ಮಂತ್ರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕು ಎಂದು ಶಾಲೆಯ ಪ್ರಾಚಾರ್ಯ ಜಯಶ್ರೀ ಮಡಿವಾಳ ಹೇಳಿದರು.
ನಗರದ ಜೇಸಿ ಪ್ರೌಢಶಾಲೆಯಲ್ಲಿ ನಡೆದ ಶಾಲಾ ಸಂಸತ್​ ರಚನಾ ಸಭೆಯಲ್ಲಿ ಮಾತನಾಡಿದ ಅವರು, ವಿದ್ಯಾಥಿರ್ಗಳಲ್ಲಿ ಆತ್ಮವಿಶ್ವಾಸ, ಸಮಯಪಾಲನೆ ಮುಖ್ಯವಾಗಿರಬೇಕು. ವಿದ್ಯಾಥಿರ್ಗಳು ವಿವಿಧ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾಡಬೇಕಾದ ಕರ್ತವ್ಯಗಳ ಬಗ್ಗೆ ಗಮನ ಕೊಡಬೇಕು ಎಮದರು.
ಶಾಲೆಯ ಸಮಾಜ ವಿಜ್ಞಾನ ಶಿಕಿ ಮಮತಾ ಬಳ್ಳಾರಿ ಮಾತನಾಡಿ, ತಮ್ಮ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕು ಎಂದರು.
ವಿದ್ಯಾಥಿರ್ಗಳಾದ ಸಾನಿಕಾ ಕಾಲವಾಡಮಠ, ಆದರ್ಶ ಬಾರಕೇರ,ಝಿಯಾನಾಜ ಬ್ಯಾಳಿರೊಟ್ಟಿ, ಕರಿಷ್ಮಾ ಕಾಟಿಗಾರ, ಭಾಗ್ಯಾ ಹಿರೇಮಠ, ಜೈಬ್​ ಖಾಜಿ, ಗೌತಮಿ ಪುಟ್ಟಪ್ಪನವರ, ರ್ಪೂವಿ ಕೊಂಡಿಕೊಪ್ಪ, ಅಭಿಷೇಕ ಕುಕನೂರ ಹಲವರು ಶಾಲಾ ಸಂಸತ್​ ಗೆ ಆಯ್ಕೆ ಆದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net