

ಗದಗ: ಆಧುನಿಕ ಯುಗದಲ್ಲಿ ಯೋಗ ಲಾಭದಾಯಕ. ಯೋಗ ಮಾಡುವುದರಿಂದ ಜೀವನವು ಉತ್ಸಾಹದಾಯಕ ಆಗಿರುತ್ತದೆ. ಪ್ರಾಣಾಯಾಮ ಸೂರ್ಯನಮಸ್ಕಾರ ಮಾಡುವುದರಿಂದ ಏಕಾಗ್ರತೆ ಮತ್ತು ನೆನಪಿನ ಶಕ್ತಿ ವೃದ್ಧಿಸುತ್ತದೆ ಎಂದು ಪ್ರಾಚಾರ್ಯ ಜಯಶ್ರೀ ಮಡಿವಾಳರ ಹೇಳಿದರು.
ನಗರದ ಜೇಸಿ ಪ್ರೌಢಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಉಚಿತ ಯೋಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಹಿರಿಯರು ಹೇಳಿದ ವಾಣಿಯಂತೆ ಯೋಗ ಮಾಡಿದವರು ನಿರೋಗಿಗಳಾಗಿರುತ್ತಾರೆ. ಒತ್ತಡದ ಜೀವನದಿಂದ ಮುಕ್ತರಾಗಬೇಕೆಂದರೆ ಯೋಗ ಅತೀ ಅವಶ್ಯಕವಾಗಿ ಬೇಕು. ಇಂದು ಇಡೀ ವಿಶ್ವವೇ ಯೋಗಕ್ಕೆ ಪ್ರಾಮುಖ್ಯತೆ ಕೊಟ್ಟಿದೆ. ಯೋಗ ಮಾಡುವುದರಿಂದ ಮಾನಸಿಕ, ದೈಹಿಕವಾಗಿ ಆರೋಗ್ಯ ಗಟ್ಟಿ ಆಗಿರುತ್ತದೆ. ಸಧೃಢ ದೇಹಕ್ಕಾಗಿ ಯೋಗ ಅತ್ಯವಶ್ಯಕ ಎಂದು ಹೇಳಿದರು.
ಶಿಕ್ಷಕ್ಕಿ ಮಂಜುಳಾ ಬುಳ್ಳಾ ಮಾತನಾಡಿ, ವಿಜ್ಞಾನ ಮತ್ತು ತಾಂತ್ರಿಕತೆಯ ಬೆಳವಣಿಗೆಯಿಂದ ಮನುಷ್ಯನು ಆಧುನಿಕತೆಯ ಜೀವನ ಶೈಲಿಯಲ್ಲಿ ಬದಲಾಗುತ್ತಿದ್ದಾನೆ. ಹಾಗಾಗಿ ಅವನು ಜೀವನದಲ್ಲಿ ಶಾಂತಿ ನೆಮ್ಮದಿಯನ್ನು ಕಳೆದುಕೊಂಡು ಅನೇಕ ರೋಗಗಳಿಗೂ ಗುರಿಯಾಗುತ್ತಿದ್ದಾನೆ. ಯೋಗ ಸಾಧನೆಯಿಂದ ಮನುಷ್ಯನು ಒತ್ತಡ ರಹಿತ ಜೀವನ ನಡೆಸಲು, ಶಾಂತಿಯುತ ಜೀವನ ನಡೆಸಲು ಸಾಧ್ಯ ಎಂದರು.
ಪ್ರತಿಾ ಉಲಸಲ್, ಇಂಪನಾ ಶಲವಡಿ, ಅವಿನಾಶ ಗಾಣಗೇರ, ಗೌತಮಿ ಪುಟ್ಟಪ್ಪನವರ ಬೊಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.